Breaking
25 Jul 2026, Sat

ಕರಾವಳಿಯಲ್ಲಿ ಕೋಲಾಹಲ: ಭರತ್ ಕುಮ್ಡೇಲ್ ಫೋಟೋ ಹಾಕಿ ಮತ್ತೆ ರಿವೇಂಜ್ ಪೋಸ್ಟ್

ಮಂಗಳೂರು:ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ದಕ್ಷಿಣ ಕನ್ನಡ ಜಿಲ್ಲೆ ಸಹಜ ಸ್ಥಿತಿಯತ್ತ ಮರಳುತ್ತಿತ್ತು.

ಆದ್ರೆ ಮೇ27 ರಂದು ಮತ್ತೆ ಬಂಟ್ವಾಳದಲ್ಲಿ ತಲ್ವಾರ್ ಸದ್ದು ಕೇಳಿ ಬಂದಿದೆ.

ಹೌದು ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಕೊಳತ್ತಮಜಲವಿನ ನಿವಾಸಿ ಪಿಕಪ್ ಚಾಲಕ ಅಬ್ದುಲ್ ರಹಿಮಾನ್ ಹತ್ಯೆ ಮಾಡಲಾಗಿದ್ದು , ಅವರ ಜೊತೆಗಿದ್ದ ಕಲಂದರ್ ಶಾಫಿ ಎಂಬವರೂ ಮೇಲೆ ಕೊಲೆಯತ್ನ ಮಾಡಲಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ ಕೆಲವು ಮುಸ್ಲಿಂ ಮುಖಂಡರು ರಾಜೀನಾಮೆ ನೀಡಿದ್ದು ರಾಜ್ಯ ಕಾಂಗ್ರೆಸ್ ಸರಕಾರ ವಿರುದ್ಧ ಆಕ್ರೋಶಗಳನ್ನು ಹೊರಹಾಕುತ್ತಿದ್ದಾರೆ.

ವಿಚಾರ ಹೀಗಿರುವಾಗಲೇ ಇನ್ಸ್ಟಾ ಗ್ರಾಮ್ ಪೇಜ್ ಮೂಲಕ ಭಜರಂಗದಳ ಮುಖಂಡ ಭರತ್ ಕುಮ್ಡೇಲ್ ಫೋಟೋ ಹಾಕಿ ರಿವೇಂಜ್ ಬೆದರಿಕೆ ಹಾಕಿ ಪೋಸ್ಟ್ ಮಾಡಲಾಗಿದೆ.

ಭರತ್ ಕುಮ್ಡೇಲು ಎಸ್ ಡಿ ಪಿ ಐ ಕಾರ್ಯಕರ್ತ ಅಶ್ರಫ್ ಕಲಾಯಿ ಹತ್ಯೆಯ ಪ್ರಮುಖ ಆರೋಪಿಯಾಗಿದ್ದಾರೆ ಅಂತ ಹೇಳಲಾಗುತ್ತಿದೆ.

ಕಳೆದ ಕೆಲ ತಿಂಗಳುಗಳಿಂದ ಹಿಂದೆ ಕೂಡ ಇನ್ಸ್ಟಾ ಗ್ರಾಮ್ ಪೇಜ್ ಮೂಲಕ ಭರತ್ ಕುಮ್ಡೇಲು ಮೇಲೆ ನಿರಂತರ ಬೆದರಿಕೆ ಹಾಕಲಾಗಿದ್ದು, ಈ ವಿಚಾರ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಅವರಿಗೆ ದೂರು ನೀಡಿದ ಬಳಿಕ ರಿವೇಂಜ್ ಪೋಸ್ಟ್ ವಿವಾದ ತಣ್ಣಗಾಗಿತ್ತು.

ಯಾವಾಗ ರಹೀಮಾನ್ ಹತ್ಯೆಯಾಯಿತೋ ಮತ್ತೆ ರಿವೇಂಜ್ ಮಾಡುವ ಪೋಸ್ಟ್ ವಾರ್ ಆರಂಭವಾಗಿದೆ.

Leave a Reply

Your email address will not be published. Required fields are marked *