ಮಂಗಳೂರು: ನಗರದ ಕಾರಗ್ರಹದಲ್ಲಿ ಮತ್ತೆ ಖೈದಿಗಳ ನಡುವೆ ಗಲಾಟೆ ನಡೆದಿದೆ , ಜೈಲಿನಲ್ಲಿ ಅಡುಗೆ ಮಾಡುತ್ತಿದ್ದ ಹಿಂದೂ ಖೈದಿಗೆ ಮತ್ತೋರ್ವ ಖೈದಿ ಮುನೀರ್ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ ಎಂದು ವರದಿ ತಿಳಿಸಿದೆ.
ಅಡುಗೆ ಮಾಡುತ್ತಿದ್ದ ಖೈದಿಗೆ ಮುನೀರ್ ಹೊಡೆದಿದ್ದಕ್ಕೆ ಮತ್ತೆ ಜೈಲಿನಲ್ಲಿ ಗಲಾಟೆ ನಡೆದಿದ್ದು, ಈ ಸಂದರ್ಭ ಇತರ ಖೈದಿಗಳ ಗುಂಪು ಮುನೀರ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು,ಈ ವೇಲೆ ಜೈಲು ಸಿಬ್ಬಂದಿಗಳು ಮುನೀರ್ ಮೇಲೆ ಆಗುತ್ತಿದ್ದ ಹಲ್ಲೆಯನ್ನು ತಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಎರಡು ದಿನದ ಹಿಂದೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಚೋಟ್ಟೆ ನೌಷದ್ ಎಂಬಾತನ ಮೇಲೆ ಹಲ್ಲೆ ನಡೆದಿತ್ತು, ಅನಂತರ ಅವನನ್ನ ಅಲ್ಲಿಂದ ಮೈಸೂರು ಜೈಲಿಗೆ ಶಿಫ್ಟ್ ಮಾಡಲಾಗಿತ್ತು ಇದೀಗ ಮತ್ತೆ ಖೈದಿಗಳ ನಡುವೆ ಮತ್ತೆ ಮಾರಾಮಾರಿ ನಡೆದಿದೆ.
ಬರ್ಕೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.





