Breaking
23 May 2025, Fri

ಶಿಕ್ಷಣ ಮತ್ತು ಸಂಸ್ಕಾರದ ಮಹತ್ವ ನಾರಾಯಣಗುರುಗಳ ಸಂದೇಶದ ಸಾರ : ಜಯರಾಮ ಪೂಜಾರಿ

ಬಂಟ್ವಾಳ : ಮಾನವನ ಬದುಕಿನಲ್ಲಿ ಶಿಕ್ಷಣ ಮತ್ತು ಸಂಸ್ಕಾರ ಎಂಬ ಎರಡು ಅಡಿಪಾಯಗಳಿವೆ. ಶಿಕ್ಷಣವು ಬುದ್ಧಿಶಕ್ತಿಯನ್ನು ಬೆಳಸುತ್ತದೆ, ಸಂಸ್ಕಾರವು ನಡವಳಿಕೆಗೆ ಶಿಷ್ಟತೆ ಮತ್ತು ಮೌಲ್ಯಗಳನ್ನು ನೀಡುತ್ತದೆ. ನಾರಾಯಣಗುರುಗಳ ಜೀವನ ಮತ್ತು ಅವರ ಸಂದೇಶಗಳು ಇಂದು ಶಿಕ್ಷಣ ಮತ್ತು ಸಂಸ್ಕಾರದ ನಿಜವಾದ ಅರ್ಥವನ್ನು ನಮಗೆ ತಿಳಿಸುತ್ತವೆ ಎಂದು ನಿವೃತ್ತ ಜಿಲ್ಲಾ ಆರೋಗ್ಯ ನಿರೀಕ್ಷಕರಾದ ಜಯರಾಮ ಪೂಜಾರಿ ತಿಳಿಸಿದರು.

ಅವರು ಯುವವಾಹಿನಿ ಬಂಟ್ಟಾಳ ಘಟಕದ ಮಾಜಿ ಅಧ್ಯಕ್ಷರಾದ ಹರೀಶ್ ಎಸ್ ಕೊಟ್ಯಾನ್ ಬೊಂಡಾಲ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 42 ಮಾಲಿಕೆಯಲ್ಲಿ ಗುರು ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಯುವವಾಹಿನಿ ಘಟಕದ ಪ್ರಥಮ ಉಪಾಧ್ಯಕ್ಷರಾದ ನಾರಾಯಣ ಪಲ್ಲಿಕಂಡ, ಮಹಿಳಾ ಸಂಘಟನ ಕಾರ್ಯದರ್ಶಿ ಹರಿಣಾಕ್ಷಿ ನವೀಶ್ ನಾವೂರು, ಮಾಜಿ ಅಧ್ಯಕ್ಷರಾದ ಶಿವಾನಂದ ಎಂ, ಅರುಣ್ ಮಹಾಕಾಳಿಬೆಟ್ಟು, ನಾಗೇಶ್ ಪೊನ್ನೊಡಿ, ರಾಮಚಂದ್ರ ಸುವರ್ಣ, ರಾಜೇಶ್ ಸುವರ್ಣ, ಪ್ರೇಮನಾಥ್ ಕರ್ಕೇರ, ವಿವೇಕಾನಂದ ಪೂಜಾರಿ , ಸದಸ್ಯರಾದ ಪ್ರಶಾಂತ್ ಏರಮಲೆ, ಯೋಗೀಶ್ ಕಲ್ಲಡ್ಕ, ಸತೀಶ್ ಬಾಯಿಲ,ನಿಕೇಶ್ ಕೊಟ್ಯಾನ್ ನಾಗೇಶ್ ಏಲಬೆ, ಯಶೋಧರ ಕಡಂಬಳಿಕೆ, ಸಚಿನ್ ಕೊಡ್ಮಾಣ್, ಜಗದೀಶ್ ಕಲ್ಲಡ್ಕ, ಚಿನ್ನಾ ಕಲ್ಲಡ್ಕ, ಭವಾನಿ ನಾರಾಯಣ, ನಾಗೇಶ್ ಎಂ ಮತ್ತಿತರರು ಉಪಸ್ಥಿತರಿದ್ದರು.

ಗುರುಸಂದೇಶದ ಮೊದಲಾಗಿ ಭಜನಾ ಸಂಕೀರ್ತನೆ ನಡೆಯಿತು. ಹಾರ್ಮೋನಿಯಂ ನಲ್ಲಿ ರಾಜೇಶ್ ಅಮ್ಟೂರು ಮತ್ತು ತಬಲಾ ದಲ್ಲಿ ಸಾತ್ವಿಕ್ ದೇರಾಜೆ ಸಹಕರಿಸಿದರು.

ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *