Breaking
14 May 2026, Thu

ಕುಮ್ಡೆಲು: ಶ್ರೀ ಕೋರ್ದಬ್ಬು ತನ್ನಿಮಾನಿಗ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ, ಧಾರ್ಮಿಕ ಸಭೆ

ಜಾತಿ,ರಾಜಕೀಯ ಬಿಟ್ಟು ಧರ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳವ:ಡಾ ರವೀಶ್ ಪಡುಮಲೆ.

ಬಂಟ್ವಾಳ : ಸನಾತನ ಮೂಲ ಸಂಸ್ಕೃತಿ, ಸಂಸ್ಕಾರ ಉಳಿಸಿಕೊಳ್ಳಬೇಕಾಗಿರುವುದು ಈ ಸಂದರ್ಭದ ತುರ್ತು, ಜಾತಿ ಮತ್ತು ರಾಜಕೀಯ ಬಿಟ್ಟು ನಾವೆಲ್ಲರೂ ಹಿಂದೂ ಎನ್ನುವ ಮನೋಭಾವನೆಯಿಂದ ಧರ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ, ಎಲ್ಲರೂ ಒಗ್ಗೂಡಿದರೆ ಸಾಮರಸ್ಯದ ಜೀವನ ಸಾಧ್ಯ ಎಂದು ದೈವ ನರ್ತಕ ಹಾಗೂ ಉಪನ್ಯಾಸಕ ಡಾ ರವೀಶ್ ಪಡುಮಲೆ ಹೇಳಿದರು.

ಅವರು ಶ್ರೀ ನಾಗಬ್ರಹ್ಮ ಸನ್ನಿಧಿ ಶ್ರೀ ಕೋರ್ದಬ್ಬು ದೈವಸ್ಥಾನ , ಕುಮ್ಡೆಲು ಪುದು -ತುಂಬೆ ಇಲ್ಲಿ ಶ್ರೀ ಕೋರ್ದಬ್ಬು ತನ್ನಿಮಾನಿಗ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ ಮತ್ತು 75ನೇ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ಎ. 20ರಂದು ಆದಿತ್ಯವಾರ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.

ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಾಚನ ನೀಡಿ, ಮನೆಯೇ ಮೊದಲ ಪಾಠ ಶಾಲೆ,ಮನೆಯನ್ನೇ ಆಲಯ ಮಾಡಿ, ಪ್ರತಿ ಮನೆಯಿಂದ ಪರಿವರ್ತನೆಯಾಗಬೇಕು, ವ್ಯಕ್ತಿ ವಿಕಾಸದಿಂದ ರಾಷ್ಟ್ರ ವಿಕಾಸ ಸಾಧ್ಯ,ಅರಿತು,ಬೆರೆತು ಬದುಕಿ ಬಾಳಿದರೆ ಬದುಕು ಪಾವನ ವಾಗುತ್ತದೆ,ಯುವ ಶಕ್ತಿ ಹಾಗೂ ಮಾತೃಶಕ್ತಿಯಿಂದ ಧರ್ಮ ಗಟ್ಟಿಯಾಗಿ ಸಮಾಜ ಸದೃಢ ವಾಗುತ್ತದೆ,ಸನಾತನ ಧರ್ಮ ಚಿರಾಯುಯಾಗಲಿ ಎಂದು ಹೇಳಿದರು.

ಮಾಣಿಲ ಶ್ರೀಧಾಮದ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಾಚನ ನೀಡಿ,ನಮ್ಮ ಧರ್ಮದ ಎಲ್ಲಾ ಜಾತಿ ಸಮುದಾಯಗಳನ್ನು ಒಟ್ಟು ಮಾಡುವ ಶಕ್ತಿ ದೈವರಾಧನೆಗೆ ಇದೆ,ಹಿಂದೂ ಧರ್ಮದ ಅಸ್ತಿತ್ವ ಉಳಿಯಲು ದೈವರಾದನೆಯ ಪಾತ್ರವು ಇದೆ. ಮುಂದಿನ ತಲೆಮಾರಿಗೆ ದೈವರಾದನೆ ಬಗ್ಗೆ ತಿಳಿಸುವ ಮಹತ್ತರ ಜವಾಬ್ದಾರಿ ನಮಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ದ ಕ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮ ನ ಪಾ ದ ಮಹಾಪೌರ ಮನೋಜ್ ಕುಮಾರ್,ಆಡಳಿತ ಮುಕ್ತೇಸರರಾದ ಭಾಸ್ಕರ ಚೌಟ, ಪುನರ್ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ, ಅಧ್ಯಕ್ಷ ಉಮೇಶ್ ಸಾಲಿಯಾನ್ ಬೆಂಜನಪದವು, ಕಾರ್ಯಧ್ಯಕ್ಷರಾದ ಗಣೇಶ್ ಸುವರ್ಣ ತುಂಬೆ ಹಾಗೂ ಚಂದ್ರಶೇಖರ್ ಗಾಂಭೀರ ಸುಜೀರು ಗುತ್ತು,ಗುರಿಕಾರ ವೆಂಕಪ್ಪ ಕುಮ್ಡೆಲು,ರಾಧಾಕೃಷ್ಣ ತಂತ್ರಿ ಬೆಂಜನಪದವು, ಉಪಸ್ಥಿತರಿದ್ದರು.

ಪ್ರದಾನ ಸಂಚಾಲಕ ತೇವು ತಾರಾನಾಥ ಕೊಟ್ಟಾರಿ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು, ರಾಜೇಶ್ ಕುಲಾಲ್ ಧನ್ಯವಾದವಿತ್ತು,ಜಗದೀಶ ಕಡೆಗೋಳಿ ಸಹಕರಿಸಿದರು, ದೀಪಕ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ದಾಸವಾಣಿ ಖ್ಯಾತಿಯ ಮೈಸೂರು ರಾಮಚಂದ್ರ ಆಚಾರ್ಯ ಇವರಿಂದ ದಾಸ ಲಹರಿ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ನಡೆಯಿತು.

Leave a Reply

Your email address will not be published. Required fields are marked *