Breaking
28 Jul 2026, Tue

ವಕ್ಪ್ ತಿದ್ದುಪಡಿ ಮುಸೂದೆ ಜಾರಿ ತರುವ ಬಗ್ಗೆ ಪುತ್ತೂರು ಶಾಸಕರ ಅಪಸ್ವರಕ್ಕೆ ಖಂಡನೆ :ಪ್ರಭಾಕರ ಪ್ರಭು

Prabhu

ಸಿದ್ದಕಟ್ಟೆ : ಭಾರತೀಯ ಬಹುಸಂಖ್ಯಾತ ಜನರ ಬಹುನಿರೀಕ್ಷೆಯ ವಕ್ಪ್ ತಿದ್ದುಪಡಿ ಮುಸೂದೆ 2025 ಲೋಕಸಭೆ ಮತ್ತು ರಾಜ್ಯ ಸಭೆಗಳೆರಡರಲ್ಲೂ ಬಹು ಮತದೊಂದಿಗೆ ಅಂಗೀಕಾರಗೊಂಡು ರಾಷ್ಟ್ರಪತಿಯವರಿಂದ ಅಂಕಿತಗೊಂಡು ದೇಶದಲ್ಲಿ ಮಸೂದೆಯಾಗಿ ಜಾರಿಗೊಂಡಿರುವುದನ್ನು ಭಾರತೀಯ ಬಹುತೇಕ ಜನರು ಸ್ವಾಗತಿಸಿದ್ದೂ ಮುಸ್ಲಿಂ ಸಂಘಟನೆಗಳು ಸಹ ಸ್ವಾಗತಿಸಿದ್ದನ್ನು ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಸಾರ್ವಜನಿಕರು ನೋಡಿರುತ್ತಾರೆ.

ಈ ಮಸೂದೆಯನ್ನು ಕರ್ನಾಟಕದಲ್ಲಿ ಜಾರಿ ಮಾಡಲಾಗುವುದಿಲ್ಲ ಹಾಗೂ ಜಾರಿ ಮಾಡದಂತೆ ವಿಧಾನ ಸಭೆಯಲ್ಲಿ ಬಿಲ್ ಪಾಸ್ ಮಾಡುತ್ತೇವೆ ಎಂಬಿತ್ಯಾದಿ ಹೇಳಿಕೆಗಳನ್ನು ನೀಡುತ್ತಿರುವ ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ ಯವರ ಹೇಳಿಕೆಯನ್ನು ಬಂಟ್ವಾಳ ಬಿ ಜೆ ಪಿ ಮಂಡಲದ ಕಾರ್ಯದರ್ಶಿ ಪ್ರಭಾಕರ ಪ್ರಭು ಪತ್ರಿಕಾ ಹೇಳಿಕೆಯ ಮೂಲಕ ಖಂಡಿಸಿದ್ದಾರೆ.

ಈ ರೀತಿಯಲ್ಲಿ ಧರ್ಮಾಧರಿತ ಮಸೂದೆ ಎಂದು ಬಣ್ಣಿಸುವ ಶಾಸಕರು ಕರ್ನಾಟಕದಲ್ಲಿ ಒಂದು ಧರ್ಮಕ್ಕೆ ಸೇರಿದ ವರ್ಗಕ್ಕೆ ಸರಕಾರಿ ಕಾಮಗಾರಿಗಳ ಗುತ್ತಿಗೆಗಳಲ್ಲಿ ಶೇ 5 ರಷ್ಟು ಮೀಸಲಿಡುವ ಕಾಯಿದೆ ವಿಧಾನ ಸಭೆಯಲ್ಲಿ ಮಂಡಿಸಿದಾಗ ಯಾಕೆ ವಿರೋಧ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *