Breaking
23 Mar 2026, Mon

ಕುಂದಾಪುರ:ಯಕ್ಷ ಚಿತ್ರ “ವೀರಚಂದ್ರಹಾಸ” ಕ್ಕೆ ಮಲ್ಯಾಡಿ ಚಿಕ್ಕು ದೇವರ ಅಭಯ

ಕುಂದಾಪುರ: ಕುಂದಾಪುರ ಮೂಲದ ಪ್ರತಿಭೆ, ಕನ್ನಡ ಚಿತ್ರರಂಗದ ಪ್ರತಿಭಾವಂತ ಸಂಗೀತ ನಿರ್ದೇಶಕ,ನಟ,ನಿರ್ದೇಶಕ,ಸಂಭಾಷಣಾಕಾರ,ನಿರ್ಮಾಪಕ ,ಗೀತರಚನಾಕಾರ ರವಿ ಬಸ್ರೂರ್ ಅವರ ಬಹು ನಿರೀಕ್ಷಿತ ಯಕ್ಷ ಚಲನ ಚಿತ್ರ “ವೀರಚಂದ್ರಹಾಸ” ಏ.18 ರಂದು ಚಿತ್ರ ತೆರೆ ಕಾಣಲಿದೆ.

ಈ ಚಿತ್ರದ ಯಶಸ್ವಿಯಾಗಿ ರವಿ ಬಸ್ರೂರ್ ಪರವಾಗಿ ಕುಟುಂಬಸ್ಥರು ಕುಂದಾಪುರದಲ್ಲಿರುವ ಮಲ್ಯಾಡಿ ಚಿಕ್ಕು ದೇವರ ಗುಡಿಯಲ್ಲಿ ನಡೆದ ಬೆಳಕಿನ ಪೂಜೆಯಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡಿದರು.

ಈ ವೇಳೆ ದೇವರು ಅಭಯ ನೀಡಿದ್ದು ಎಲ್ಲ ಕಡೆಯಲ್ಲೂ ಕೇಳ್ತಿರುವುದು ಚಂದ್ರಹಾಸ. ಈ ವಿಚಾರದಲ್ಲಿ ಯಾರೂ ಭಯ ಪಡಬೇಕಾದ ಅವಶ್ಯಕತೆ ಇಲ್ಲ.ನೀವು ಕೊಟ್ಟ ಬೆಳಕಿನ ಸೇವೆಯನ್ನು ಸಂತೋಷದಿಂದ ಸ್ವೀಕಾರ ಮಾಡಿದ್ದೇವೆ. ಚಿತ್ರ ಯಶಸ್ಸು ಕಾಣುತ್ತದೆ ಎಂದು ಭರವಸೆ ನೀಡಿದೆ.

1983 ರಲ್ಲಿ ಕುಂದಾಪುರದ ಬಸ್ರೂರು ಗ್ರಾಮದಲ್ಲಿ ಜನಿಸಿದ ರವಿ ಬಸ್ರೂರ್ ಅವರು 2014 ರಲ್ಲಿ ತೆರೆಕಂಡ `ಉಗ್ರಂ’ ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡುವದರ ಮೂಲಕ ಕನ್ಡಡ ಚಿತ್ರರಂಗಕ್ಕೆ ಪ್ರವೇಶಿದರು. ಈ ಚಿತ್ರದ ಹಿನ್ನಲೆ ಸಂಗೀತಕ್ಕಾಗಿ ಜೀ ಮ್ಯುಸಿಕ್ ಪ್ರಶಸ್ತಿ ಕೂಡ ಪಡೆದರು. ನಂತರ “ಕರ್ವ”, “ಮಫ್ತಿ”, “ಅಂಜನಿಪುತ್ರ”, “ಕಟಕ” ಮುಂತಾದ ಚಿತ್ರಗಳಿಗೆ ಸಂಗೀತ ನೀಡಿರುವ ರವಿ “ಅಂಜನಿಪುತ್ರ” ಚಿತ್ರದ ಗೀತೆಯೊಂದಕ್ಕೆ ಸೈಮಾ ಅತ್ತ್ಯುತ್ತಮ ಹಿನ್ನಲೆ ಗಾಯಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕುಂದಾಪುರ ಕನ್ನಡ ಭಾಷೆಯಲ್ಲಿ “ಗರಗರ ಮಂಡಲ” ಮತ್ತು “ಬಿಲಿಂಡರ್” ಎಂಬ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನಾಗಿ ಕೂಡ ಮಿಂಚಿದ್ದಾರೆ.

2017 ರಲ್ಲಿ ಭಾನಮತಿ ಮತ್ತು ಮಾಟ-ಮಂತ್ರಗಳ ಕುರಿತ ಚಿತ್ರ “ಕಟಕ” ವನ್ನು ನಿರ್ದೇಶನ ಮಾಡಿದ್ದಾರೆ.ಇದರ ಜೊತೆಗೆ ಪೌರಣಿಕ ಯಕ್ಷಗಾನ ಪ್ರಸಂಗವನ್ನು ತೆರೆಯ ಮೇಲೆ ರವಿ ಬಸ್ರೂರ್ ಅವರು ತರಲು ಪ್ರಯತ್ನವನ್ನು ಮಾಡಿದ್ದು ಚಿತ್ರರಂಗದ ಗಣ್ಯರು,ರಾಜಕೀಯ ನಾಯಕರು ಮತ್ತು ಸಾರ್ವಜನಿಕ ವಲಯದಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *