ಬೆಂಗಳೂರು: ಬದುಕಿದ್ದಾಗಲೇ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ತನಗೆ ತಾನೇ “ಶ್ರದ್ಧಾಂಜಲಿ” ಎಂದು ಪೋಸ್ಟ್ ಮಾಡಿದ್ದು, ಈ ವಿಚಿತ್ರ ಫೋಸ್ಟ್ ಇದೀಗ ಭಾರೀ ವೈರಲ್ ಆಗುತ್ತಿದೆ.
ಪ್ರಶಾಂತ್ ಹರಿದಾಸ್ ಎಂಬ ಬೆಂಗಳೂರಿನ ಯುವಕ ಈ ಪೋಸ್ಟ್ ಮಾಡಿದ್ದು, ಇದಕ್ಕೆ ಕಾರಣವನ್ನೂ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕೆಲಸ ಸಿಗದೆ ಹತಾಶೆಗೊಂಡ ಈ ಯುವಕ ಸಾಮಾಜಿಕ ಜಾಲತಾಣ ಲಿಂಕ್ಡ್ ಇನ್ ನಲ್ಲಿ “ಧನ್ಯವಾದಗಳು ಲಿಂಕ್ಡ್ ಇನ್, ಉದ್ಯೋಗದಾತರಿಗೆ ಧನ್ಯವಾದಗಳು. ನನ್ನ ಅರ್ಜಿಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಧನ್ಯವಾದಗಳು. ಉದ್ಯೋಗ ಹುಡುಕಲು ಪ್ರಯತ್ನಿಸುತ್ತಾ ನನ್ನ ಸಮಯ ಹಾಗೂ ಹಣವನ್ನು ವ್ಯರ್ಥ ಮಾಡಿದ್ದಕ್ಕಾಗಿ ಧನ್ಯವಾದಗಳು. ಈ ಫೋಸ್ಟ್ ನಂತರ ಯಾರೂ ನನನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದಿಲ್ಲ ಎಂದು ನನಗೆ ಚೆನ್ನಾಗಿಯೇ ತಿಳಿದಿದೆ. ” RIP ” ಎಂದು ಬರೆದುಕೊಂಡಿದ್ದಾರೆ.
ಪೋಸ್ಟ್ ನಲ್ಲಿ ಕೆಲಸಕ್ಕಾಗಿ 3 ವಷದ ನಡೆಸಿದ ಅಲೆದಾಟ, ಮಾನಸಿಕ ಯಾತನೆಗಳನ್ನು ಹೇಳಿಕೊಳ್ಳುವುದರ ಜೊತೆಗೆ “ಕೆಲಸ ಸಿಗುವುದರಲ್ಲಿ ಮಾತ್ರ ಸತ್ತಿದ್ದೇನೆ. ಆದರೆ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಹೋಗಲ್ಲ. ಜೀವನವನ್ನು ನಾನು ಇಷ್ಟಪಡುತ್ತೇನೆ ಎಂದು ಯುವಕ ಸ್ಪಷ್ಟಪಡಿಸಿದ್ದಾನೆ”




