ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ (ರಿ.) ಹಳೇಕೋಟೆ, ಬೆಳ್ತಂಗಡಿ, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ (ಲಿ.) ಹಾಗೂ ಸ್ಪಂದನಾ ಸೇವಾ ಸಂಘ, ಬೆಳ್ತಂಗಡಿ ಇವುಗಳ ಸಹಯೋಗದಲ್ಲಿ ಯುವ ವೇದಿಕೆ ಮತ್ತು ಮಹಿಳಾ ವೇದಿಕೆಯ ನೇತೃತ್ವದಲ್ಲಿ ನಡೆದ ತಾಲೂಕು ಮಟ್ಟದ ‘ಗೌಡೆರೆ ಗೌಜಿ ಗಮ್ಮತ್ 2026’ ಕ್ರೀಡಾಕೂಟದಲ್ಲಿ ಮೊಗ್ರು ಗ್ರಾಮದ ತಂಡಗಳು ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿವೆ.

ಪಂದ್ಯಾಟದಲ್ಲಿ ಮೊಗ್ರು ಗ್ರಾಮದ ಪುರುಷರ ಹಗ್ಗಜಗ್ಗಾಟ ತಂಡ ಪ್ರಥಮ ಸ್ಥಾನ, ಮಹಿಳೆಯರ ತ್ರೋಬಾಲ್ ತಂಡ ಪ್ರಥಮ ಸ್ಥಾನ ಹಾಗೂ ಮಹಿಳೆಯರ ಹಗ್ಗಜಗ್ಗಾಟ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಈ ಸಾಧನೆಯ ಮೂಲಕ ಮೊಗ್ರು ಗ್ರಾಮವು ಶಾಶ್ವತ ಫಲಕ ಹಾಗೂ ನಗದು ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ.





