Breaking
23 Nov 2026, Mon

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಬಂಟ್ವಾಳ ತಾಲೂಕು ಪುಂಜಾಲಕಟ್ಟೆ ವಲಯದ ಉಳಿ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಬಂಟ್ವಾಳ ತಾಲೂಕು ಪುಂಜಾಲಕಟ್ಟೆ ವಲಯದ ಉಳಿ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಕಕ್ಯ ಪದವು ಪಂಚಾಯತ್ ಸಭಾ ಭವನದಲ್ಲಿ ನಂಬರ್ 22 ಭಾನುವಾರ ಜರಗಿತು.

ಕಾರ್ಯಕ್ರಮದ ಉದ್ಘಾಟನೆ ಯನ್ನು ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ನೆರವೇರಿಸಿದರು.

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಚಿದಾನಂದ ರೈ ಕಕ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಹಾ ನಿರ್ದೇಶಕರು ದಿನೇಶ್. ಡಿ ಪೂಜ್ಯರ ಕನಸಿನ ಕೂಸು ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಹತ್ತು ಹಲವಾರು ಕಾರ್ಯಕ್ರಮ ಗಳಿದ್ದು ಸದಸ್ಯರು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಆರ್ಥಿಕ ಸಹಕಾರದಿಂದ ಸ್ವಾವಲಂಬಿ ಯಾಗಿದ್ದಾರೆ. ಗ್ರಾಮದಲ್ಲಿ ಅನೇಕ ಕಾರ್ಯಕ್ರಮ ಅನುಷ್ಠಾನ ಆಗಲಿ ಎಂದು ಮಾಹಿತಿ ಮಾರ್ಗದರ್ಶನ ನೀಡಿದರು.

ಸೈoಟ್ ಫಿಲೋಮಿನಾ ಕಾಲೇಜಿನ ಸಹಾಯಕ ಉಪನ್ಯಾಸಕ ಸಂತೋಷ್ ಶೆಟ್ಟಿ ವೀರೇಂದ್ರ ಹೆಗ್ಗಡೆ ದಂಪತಿಗಳು ಹಾಕಿದ ಕಾರ್ಯಕ್ರಮಗಳು ಸದಸ್ಯರಿಗೆ ಅನುಕೂಲ ಆಗಿದೆ. ಇದರಿಂದ ಸಮಾಜ ಸಾಕಷ್ಟು ಅಭಿವೃದ್ಧಿ ಹೊಂದಿದೆ ಮಕ್ಕಳಿಗೆ ನಾವು ಉನ್ನತ ಶಿಕ್ಷಣ ಕೊಡುವುದರ ಜೊತೆಗೆ ಮಾನವೀಯ ಮೌಲ್ಯವನ್ನ ಅವರ ಜೀವನದಲ್ಲಿ ಅಳವಡಿಸಿಕೊಳ್ಳುವುದನ್ನು ನಾವು ಕಲಿಸಬೇಕು ಆಗ ಸಮಾಜ ಇನ್ನಷ್ಟು ಅಭಿವೃದ್ಧಿ ಆಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಸುರೇಶ್ ಮೈರ ಮಾತನಾಡುತ್ತಾ ಯೋಜನೆಯಿಂದ ನಮ್ಮ ಗ್ರಾಮ ತುಂಬಾ ಅಭಿವೃದ್ಧಿ ಆಗಿದೆ ಮನೆ ಇಲ್ಲದ ಕುಟುಂಬಕ್ಕೆ ವಾತ್ಸಲ್ಯ ಕಾರ್ಯಕ್ರಮದಲ್ಲಿ ಯೋಜನೆಯಿಂದ ಮನೆ ನಿರ್ಮಾಣ ಆಗಿದೆ. ಎಲ್ಲರೂ ಸದುಪಯೋಗ ಪಡೆದುಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಜಯಾನಂದ್ ಪಿ, ಉಳಿ ಒಕ್ಕೂಟದ ಅಧ್ಯಕ್ಷರು ವಿಶ್ವನಾಥ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 2 ಒಕ್ಕೂಟಗಳ ನಿಕಟ ಪೂರ್ವ ಪದಾಧಿಕಾರಿಗಳು ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರ ಮಾಡಿದರು. ಯೋಜನೆಯಿಂದ ಪ್ರಗತಿ ನಿಧಿ ಪಡೆದುಕೊಂಡು ಸ್ವ ಉದ್ಯೋಗ ಮಾಡಿ ಅಭಿವೃದ್ಧಿ ಹೊಂದಿದ ಸುಲೋಚನಾ ಹರೀಶ್ ರವರನ್ನು ಗೌರವಿಸಲಾಯಿತು. ಪ್ರೇಮ ಹಾಗೂ ರೋಹಿನಾಥ್ ಗೌಡ ರವರು ಯೋಜನೆಯಿಂದ ತಾನು ಅಭಿವೃದ್ಧಿ ಹೊಂದಿದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಸ್ವ ಸಹಾಯ ತಂಡದ ಸದಸ್ಯರು, ಪದಾಧಿಕಾರಿಗಳು ಸೇವಾಪ್ರತಿನಿಧಿ ಉಷಾ, ಅಮೃತಾ, ಗೋವಿಂದ, ಸುಧಾ ರೈ ಹಾಗೂ ವಿ ಎಲ್ ಇ ತುಳಸಿ ಕುಸುಮ ಉಪಸ್ಥಿತರಿದ್ದರು

ವಲಯದ ಮೇಲ್ವಿಚಾರಕಿ ಸವಿತಾ ಸ್ವಾಗತಿಸಿದರು,ಸೇವಾಪ್ರತಿನಿಧಿ ಶೇಖರ್ ವಂದಿಸಿದರು.ಪ್ರಗತಿ ಬಂದು ತಂಡದ ರಾಜ್ ಕುಮಾರ್. ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *