Breaking
21 Nov 2026, Sat

ಬಿಲ್ಲವ ಸಮಾಜ ಸೇವಾ ಟ್ರಸ್ಟ್ ಕಲ್ಲಡ್ಕದ ವಿಜ್ಞಾಪನ ಪತ್ರ, ಗುರುಪೂಜೆಯ ಆಮಂತ್ರಣ ಪತ್ರ ಹಾಗೂ ಲಾಂಛನ ಬಿಡುಗಡೆ

ಕಲ್ಲಡ್ಕ: ಬಿಲ್ಲವ ಸಮಾಜ ಸೇವಾ ಟ್ರಸ್ಟ್ (ರಿ.) ಕಲ್ಲಡ್ಕ ಇದರ ವಿಜ್ಞಾಪನ ಪತ್ರ, ಗುರುಪೂಜೆಯ ಆಮಂತ್ರಣ ಪತ್ರ ಹಾಗೂ ಲಾಂಛನವನ್ನು ನವೆಂಬರ್ 20ರಂದು ಶುಕ್ರವಾರ ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಜೈರಾಜ್ ಸೋಮಸುಂದರ್, ಕೋಶಾಧಿಕಾರಿ ಪದ್ಮರಾಜ್ ಪೂಜಾರಿ, ಟ್ರಸ್ಟಿ ಕಿಶೋರ್ ಕುಮಾರ್ ದಂಡೆಕೇರಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರು ಉಪಸ್ಥಿತರಿದ್ದರು.

ಬಿಲ್ಲವ ಸಮಾಜ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ಶರತ್ ಅಮ್ಟಾರ್, ಕಾರ್ಯದರ್ಶಿ ಕಿಶೋರ್ ಕಟ್ಟೆಮಾರ್, ಕೋಶಾಧಿಕಾರಿ ದಿನೇಶ್ ಕೃಷ್ಣಕೋಡಿ, ಉಪ ಕಾರ್ಯದರ್ಶಿ ಜಯಪ್ರಶಾಂತ್ ಕುದ್ರೆಮಾರ್, ಹಿರಿಯರಾದ ಮನಮೋಹನ್ ಕಟ್ಟೆಮಾರ್, ಟ್ರಸ್ಟಿಗಳಾದ ಆನಂದ ಬೋಳಂತೂರು, ಯತೀನ್ ಕುಮಾರ್, ಚಿತ್ತರಂಜನ್ ಹೊಸಕಟ್ಟ, ರಮೇಶ್ ನೆಟ್ಲ, ಯೋಗೀಶ್ ಪೂಜಾರಿ, ಸಂದೇಶ್ ಕೃಷ್ಣಕೋಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *