Breaking
20 Nov 2026, Fri

ಬಿಲ್ಲವ ಸಮಾಜ ಸೇವಾ ಟ್ರಸ್ಟ್ (ರಿ) ಕಲ್ಲಡ್ಕ ಇದರ ನೂತನ ನಿವೇಶನ ಸಮತಟ್ಟು ಕಾರ್ಯಕ್ಕೆ ಚಾಲನೆ

ಕಲ್ಲಡ್ಕ: ಬಿಲ್ಲವ ಸಮಾಜ ಸೇವಾ ಟ್ರಸ್ಟ್ (ರಿ) ಕಲ್ಲಡ್ಕ ನೂತನ ನಿವೇಶನ ಕಲ್ಲಡ್ಕ ಸಮೀಪದ ಶಿವಗಿರಿಯಲ್ಲಿ ಖರೀದಿಸಿದ್ದು, ಪ್ರಪ್ರಥಮ ಬಾರಿಗೆ ಸದರಿ ಸ್ಥಳದಲ್ಲಿ ಡಿಸೆಂಬರ್ 6 ರಂದು ಶ್ರೀ ನಾರಾಯಣ ಗುರುವರ್ಯರ ಗುರು ಪೂಜೆ ಮಾಡುವ ಸಲುವಾಗಿ ನಿವೇಶನ ಸಮತಟ್ಟು ಕಾರ್ಯಕ್ಕೆ ನಂಬರ್ 19 ಗುರುವಾರ ಚಾಲನೆ ನೀಡಲಾಯಿತು.


ಶ್ರೀ ಮಂತ್ರ ದೇವತಾ ಕ್ಷೇತ್ರ ಸಾಹಿತ್ಯ ಕಟ್ಟೆಮಾರು ಇಲ್ಲಿನ ಧರ್ಮದರ್ಶಿ ಶ್ರೀ ಮನೋಜ್ ಕುಮಾರ್ ಕಟ್ಟೆಮಾರ್ ವಿಶೇಷವಾಗಿ ಪ್ರಾರ್ಥಿಸಿ , ಸ್ಥಳದಲ್ಲಿ ತೆಂಗಿನಕಾಯಿ ಹೊಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಪ್ರಮುಖರಾದ ಮಾಜಿ ಶಾಸಕ ರುಕ್ಮಯ ಪೂಜಾರಿ, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ್ ಸಾಲಿಯನ್,ಕಾರ್ಯದರ್ಶಿ ಕಿಶೋರ್ ಕಟ್ಟೆಮಾರ್, ಉಪಾಧ್ಯಕ್ಷರಾದ ಶರತ್ ಅಮ್ಟಾರ್,ಕೋಶಾಧಿಕಾರಿ ದಿನೇಶ್ ಕೃಷ್ಣಕೋಡಿ, ಜೊತೆ ಕಾರ್ಯದರ್ಶಿ ಜಯಪ್ರಶಾಂತ್ ಕುದ್ರೆಮಾರ್ ಬಿಲ್ಲವ ಸಮಾಜದ ಪ್ರಮುಖರಾದ ರತ್ನಾಕರ ಪಡೀಲ್, ಮನ್ಮೋಹನ್ ಕಟ್ಟೆಮಾರ್, ಗಿರಿಯಪ್ಪ ಪೂಜಾರಿ ಕುರ್ಮಾನ್, ಚೆನ್ನಪ್ಪ ಪೂಜಾರಿ ಗುಂಡಿಮಜಲ್, ಜಯಾನಂದ ಯೆಲ್ತೀಮಾರ್, ಜಯಂತ ಸುಧೆಕಾರ್, ನಾಗೇಶ್ ಕರಿಂಗಾನ, ಜಯಂತ ಕಟ್ಟೆಮಾರ್, ಸುಂದರ್ ಬಂಗೇರ, ದಿವಾಕರ ಪಡೀಲ್, ಪುಷ್ಪರಾಜ್ ತೋಟ, ಕೇಶವ ಸುರ್ತಿಮಾರ್,ಚೇತನ್ ಬಲ್ಕಟ್ಟ, ಮಹಾಬಲ ಮುಳಿಕೊಡಂಗೆ, ದಯಾನಂದ ಸತ್ಯಶ್ರೀ ಕಲ್ಲಡ್ಕ, ಗಂಗಾಧರ್ ಟೈಲರ್, ಉಮೇಶ್ ಸಾಲಿಯಾನ್, ಪುಷ್ಪ ದೇವಸ್ಯ,ಉಷಾ ಪುರುಷೋತ್ತಮ್, ಲೀಲಾವತಿ ಕುಕ್ಕಮಜಲ್, ಟ್ರಸ್ಟಿಗಳಾದ ಎಸ್ ಎಸ್ ಕಲ್ಲಕಟ್ಟ, ಆನಂದ ಬೋಳಂತೂರು, ಚಿತ್ತಾರಂಜನ್ ಹೊಸಕಟ್ಟಾ, ಯತೀನ್ ಪಂಚವಟಿ ಚಂದ್ರಶೇಖರ ಬಾಯಿಲ, ರಾಮಚಂದ್ರ ಪಾದೆ, ಯೋಗೀಶ್ ಗೌರೀಶ್, ಸಂದೇಶ್ ಕೃಷ್ಣಕೋಡಿ,ಶ್ರೀಧರಕೇಪುಲಕೋಡಿ, ಜಗದೀಶ್ ನರಹರಿನಗರ, ಮಂಜುನಾಥ್ ಮುಲಾರ್,ಹಾಗೂ ಬಿಲ್ಲವ ಸಮಾಜದ ಭಾಂದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *