ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ಬಂಟ್ವಾಳ ವಲಯದ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ‘ಮುದ್ದು ಕಂದ’ ಛಾಯಾಚಿತ್ರ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.

ಸ್ಪರ್ಧೆಯಲ್ಲಿ ವಿರಾಟ್ ನಾಯಕ್ (ಛಾಯಾಗ್ರಹಣ: ಜ್ಯೇಷ್ಠ ಶಕ್ತಿ ಪ್ರಸಾದ್) ಪ್ರಥಮ ಬಹುಮಾನ ಪಡೆದರೆ, ಕೃತವ್ ವೈ (ಛಾಯಾಗ್ರಹಣ: ಯೋಗೀಶ್ ಶ್ರೇಯ) ದ್ವಿತೀಯ ಹಾಗೂ ಮನಸ್ವಿ ಭಟ್ (ಛಾಯಾಗ್ರಹಣ: ಕುಮಾರಸ್ವಾಮಿ ಕನ್ಯಾನ) ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲಾ ಮುದ್ದು ಮಕ್ಕಳಿಗೆ ಸಂಘಟನೆಯ ವತಿಯಿಂದ ಅಭಿನಂದನೆ ಸಲ್ಲಿಸಲಾಗಿದೆ.

ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ ಮಂಗಳೂರಿನ ಜಗನ್ನಾಥ ಶೆಟ್ಟಿ ಹಾಗೂ ನವೀನ್ ಬೇಕಲ್ ಅವರಿಗೆ ಧನ್ಯವಾದ ಅರ್ಪಿಸಲಾಗಿದೆ. ವಿಜೇತ ಮಕ್ಕಳ ಛಾಯಾಚಿತ್ರ ಸೆರೆಹಿಡಿದ ಸಂಘದ ಸದಸ್ಯರು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಛಾಯಾಮಿತ್ರ ಸದಸ್ಯರಿಗೂ ಸಂಘದ ವತಿಯಿಂದ ಕೃತಜ್ಞತೆ ಸಲ್ಲಿಸಲಾಗಿದೆ.





