Breaking
10 Sep 2026, Thu

70 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸುಬ್ರಾಯ ಭಟ್ಟರಿಗೆ ಸನ್ಮಾನ

ಬಂಟ್ವಾಳ: ಲಯನ್ಸ್ ಕ್ಲಬ್ ಮಾಣಿ ವತಿಯಿಂದ 70 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆಯಲ್ಲಿ ಮುಂದುವರಿಯುತ್ತಿರುವ ಕೆ ಸುಬ್ರಾಯ ಭಟ್ಟರನ್ನು ಕೆದಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸನ್ಮಾನಿಸಿಸಲಾಯಿತು.

ನಿವೃತ್ತ ಶಿಕ್ಷಕ ಜಯಾನಂದ ಪೆರಾಜೆ ಅಭಿನಂದನಾ ಭಾಷಣ ಮಾಡಿ ಶಿಕ್ಷಕ ವೃತ್ತಿಯನ್ನು ಸೇವೆಯೆಂದು ತಿಳಿದು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಗುರುಕುಲ ಪದ್ದತಿಯನ್ನು ನೆನಪಿಸುತ್ತದೆ.

ತಮ್ಮ ಜೀವನವನ್ನು ಮಕ್ಕಳ, ಶಿಕ್ಷಕರ ಏಳಿಗೆಗಾಗಿ ಮೀಸಲಿಟ್ಟಿರುವುದು ಅವರಿಗೆ 93 ವರ್ಷಗಳಾಗಿದ್ದರೂ ಈಗಾಲೂ ಶಾಲೆಗೆ ಬಂದು ಕನ್ನಡ, ಗಣಿತ ಬೋಧನೆಯನ್ನು ಮಾಡುತ್ತಿರುವುದು ಜೀವನೋತ್ಸಾಹಕ್ಕೆ ಸಾಕ್ಷಿಯಾಗಿದೆ ಎಂದು ಶುಭಹಾರೈಸಿದರು.

ಮಾಣಿ ಲಯನ್ಸ್ ಕ್ಲಬ್‌ನಲ್ಲಿ ಸದಸ್ಯರಾಗಿದ್ದು ವಿವಿಧ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಹಿರಿಯ ಶಿಕ್ಷಕರಾದ ಗಂಗಾಧರ ರೈ ಮಾಣಿ ,ಜಯಾನಂದ ಪೆರಾಜೆ, ರೊನಾಲ್ಡ್ ಮೋನಿಸ್ ,ಅನಿಲ್ ಕುಮಾರ್, ಡಾ. ಉದಯ ಕೃಷ್ಣ ಬೀಡಿಗೆ ಇವರನ್ನು ಸನ್ಮಾನಿಸಲಾಯಿತು.

ಶಾಲೆಯಲ್ಲಿ ಶಿಕ್ಷಕಿಯರಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ನಗದು ನೀಡಿ ಪುರಸ್ಕರಿಸಲಾಯಿತು. ಕ್ಲಬ್ ನ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಪಾಂಡಿಬೆಟ್ಟು, ಜನಾರ್ದನ ಪೆರಾಜೆ, ಉಮೇಶ್ ಬರಿಮಾರು, ಮಾರ್ಶಲ್ ಪಾಯಸ್, ಸಚ್ಚಿದಾನಂದ ರೈ ಉಪಸ್ಥಿತರಿದ್ದರು.

ಲಯನ್ಸ್ ಅಧ್ಯಕ್ಷ ವಿನ್ಸೆಂಟ್ ಲಸ್ರಾದೊ ಅಧ್ಯಕ್ಷತೆ ವಹಿಸಿದ್ದರು ನಿವೃತ್ತ ಶಿಕ್ಷಕರಾದ ಚಂದ್ರಶೇಖರ ಭಟ್ ಕುಕ್ಕಾಜೆ ಸ್ವಾಗತಿಸಿ ಅಧ್ಯಾಪಕರ ಪರಿಚಯ ಮಾಡಿದರು. ಕೃಷ್ಣಮೂರ್ತಿ ಕೆದಿಲ, ಚಂದ್ರಶೇಖರ ಭಟ್ ಬಡೆಕಿಲ ಇದ್ದರು. ಸಂಚಾಲಕ ಸುಬ್ರಮಣ್ಯ ಭಟ್ ಬೀಡಿಗೆ ವಂದಿಸಿದರು. ಶಿಕ್ಷಕಿ ವಿನುತಾ ನಿರೂಪಿಸಿದರು.

Leave a Reply

Your email address will not be published. Required fields are marked *