ಬಂಟ್ವಾಳ: ಶ್ರೀ ವಿಜಯಲಕ್ಷ್ಮಿ ಯುವಕ ಸಂಘ (ರಿ.) ನರಿಕೊಂಬು ವತಿಯಿಂದ ಪ್ರತಿವರ್ಷ ಆಯೋಜಿಸಲಾಗುವ ಉಚಿತ ಪುಣ್ಯಕ್ಷೇತ್ರ ಸಂದರ್ಶನ ಕಾರ್ಯಕ್ರಮದ ಅಂಗವಾಗಿ ಸೆ.8ರಂದು ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಯಾತ್ರೆ ನಡೆಯಿತು.

ಸಂಘದ ಅಧ್ಯಕ್ಷ ಪ್ರಸಾದ್ ಗಾಣಿಗ ಅವರ ನೇತೃತ್ವದಲ್ಲಿ ನಡೆದ ಯಾತ್ರೆಯಲ್ಲಿ ನರಿಕೊಂಬು ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಫೂಲಳಿಯ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ, ಸುಂಕದಕಟ್ಟೆ ಹಾಗೂ ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳಿಗೆ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.

ಯಾತ್ರೆಯಲ್ಲಿ ಸಂಘದ ಸದಸ್ಯರಾದ ರಾಜೇಶ್ ನಿರ್ಮಲ್, ಕೃಷ್ಣಪ್ಪ ಅಂತರ, ಉಮೇಶ್ ಟೈಲರ್, ಪ್ರೇಮನಾಥ ಶೆಟ್ಟಿ, ಜಗದೀಶ್ ಬೋರುಗುಡ್ಡೆ, ಹರೀಶ್ ಟೈಲರ್, ಸವಿತಾ, ಉಷಾ, ವೀಣಾ ಸೇರಿದಂತೆ 50ಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು.

ಭಜನೆ ಹಾಗೂ ಭಕ್ತಿಭಾವದೊಂದಿಗೆ ನಡೆದ ಪುಣ್ಯಕ್ಷೇತ್ರ ಯಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡಿತು.



