ಬಂಟ್ವಾಳ: ಹಳೆ ವಿದ್ಯಾರ್ಥಿ ಸಂಘ, ರಾಯಿ ಹಾಗೂ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ, ರಾಯಿ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ಸೆಪ್ಟೆಂಬರ್ 6ರಂದು ಭಾನುವಾರ ರಾಯಿ ಶಾಲಾ ವಠಾರದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8 ಗಂಟೆಗೆ ಗುಳಿಗ ದೈವದ ಪರ್ವ, 9 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ. ಸಂಜೆ 4 ಗಂಟೆಗೆ ಮುದ್ದು ಕೃಷ್ಣ ವೇಷ ಸ್ಪರ್ಧೆ ಹಾಗೂ ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ಉದ್ಘಾಟನಾ ಸಮಾರಂಭವನ್ನು ಶ್ರೀ ಕ್ಷೇತ್ರ ರಾಯಿ ಪ್ರಧಾನ ಅರ್ಚಕ ಶ್ರೀ ಡಿ. ರಾಮಚಂದ್ರ ಭಟ್ ದೈಲ ಉದ್ಘಾಟಿಸಲಿದ್ದು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಸಮಿತ್ ಶಿವನಗರ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಂಟ್ವಾಳ ಕ್ಷೇತ್ರದ ಶಾಸಕ ಶ್ರೀ ರಾಜೇಶ್ ನಾಯ್ಕ ಉಳಿಪಾಡಿಗುತ್ತು ವಹಿಸಲಿದ್ದಾರೆ.

ಪ್ರಾಥಮಿಕ ಶಾಲಾ ಮಕ್ಕಳಿಗೆ ಟೇಪ್ ಕಟ್ಟಿಂಗ್, ಸೂಜಿ-ನೂಲು, ನಿಂಬೆ ಚಮಚ, ಚಾಕಲೇಟ್ ಹೆಕ್ಕುವುದು, ವಿಷಚೆಂಡು, 100 ಮೀ. ಹಾಗೂ 200 ಮೀ. ಓಟ, ಭಕ್ತಿಗೀತೆ ಮತ್ತು ಜಾನಪದ ಗೀತೆ ಸ್ಪರ್ಧೆಗಳು ನಡೆಯಲಿವೆ.
ಪ್ರೌಢಶಾಲಾ ಮಕ್ಕಳಿಗೆ 100 ಮೀ. ಹಾಗೂ 200 ಮೀ. ಓಟ, ಶಾಟ್ಪುಟ್, ಭಕ್ತಿಗೀತೆ ಮತ್ತು ಜಾನಪದ ಗೀತೆ ಸ್ಪರ್ಧೆಗಳು ಆಯೋಜಿಸಲಾಗಿದೆ.

ಮಹಿಳೆಯರಿಗೆ ತ್ರೋಬಾಲ್, ಶಾಟ್ಪುಟ್, ಸಂಗೀತ ಕುರ್ಚಿ, ವಿಷಚೆಂಡು, ಮಡಕೆ ಒಡೆಯುವುದು, ಹಗ್ಗಜಗ್ಗಾಟ ಹಾಗೂ ನಿಂಬೆ ಚಮಚ ಸ್ಪರ್ಧೆಗಳು ನಡೆಯಲಿವೆ.
ಪುರುಷರಿಗೆ ವಾಲಿಬಾಲ್, ಗುಂಡೆಸೆತ, ಹಗ್ಗಜಗ್ಗಾಟ, ಮಡಕೆ ಒಡೆಯುವುದು, 100 ಹಾಗೂ 200 ಮೀ. ಓಟ, ಶಾಟ್ಪುಟ್, ಕ್ರಾಸ್ ಕಂಟ್ರಿ, ಗೋಣಿ ಚೀಲ ಓಟ, ಬಾಸ್ಕೆಟ್ಬಾಲ್ ಹಾಗೂ ಸ್ಲೋ ಬೈಕ್ ರೇಸ್ ಸ್ಪರ್ಧೆಗಳು ನಡೆಯಲಿವೆ.

ಸಾರ್ವಜನಿಕರಿಗಾಗಿ ಮಡಕೆ ಒಡೆಯುವುದು, ಸ್ಲೋ ಬೈಕ್ ರೇಸ್, ಜಾನಪದ ಗೀತೆ, ಭಕ್ತಿಗೀತೆ, ರಸಪ್ರಶ್ನೆ ಹಾಗೂ ನಿಧಿ ಹುಡುಕುವುದು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಅಧ್ಯಕ್ಷರು, ಸರ್ವ ಸದಸ್ಯರು, ಹಳೆ ವಿದ್ಯಾರ್ಥಿಗಳು ಹಾಗೂ ಊರ-ಪರವೂರಿನ ಸಮಸ್ತರು ಪ್ರೀತಿಪೂರ್ವಕವಾಗಿ ಸ್ವಾಗತ ಕೋರಿದ್ದಾರೆ.


