Breaking
24 Aug 2026, Mon

ಮಹಾಲಸ ಟ್ರಾವೆಲ್ಸ್ ಬಸ್‌ನಲ್ಲಿ ಕಳೆದುಹೋದ ₹20,000 ಹಣ ಹಿಂದಿರುಗಿಸಿ ಮಾನವೀಯತೆ ಮೆರೆದ ಸಹಪ್ರಯಾಣಿಕ

ಬಂಟ್ವಾಳ: ಕುದ್ಕೋಳಿಯಿಂದ ಪುಂಜಾಲಕಟ್ಟೆಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಆರೋಗ್ಯ ವಿಚಾರಣೆಯ ಸಲುವಾಗಿ ಕೊಂಡೊಯ್ಯುತ್ತಿದ್ದ ₹20,000 ನಗದು ಹಣವನ್ನು ಮಹಾಲಸ ಟ್ರಾವೆಲ್ಸ್ ಬಸ್‌ನಲ್ಲಿ ಕಳೆದುಕೊಂಡಿದ್ದರು.

ಕಳೆದುಹೋದ ಹಣವನ್ನು ಸಹಪ್ರಯಾಣಿಕ ನೈನಾಡು ನಿವಾಸಿ ಕಿರಣ್ ಎಂಬವರು ಪತ್ತೆಹಚ್ಚಿ, ಹಣವನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕಿರಣ್ ಅವರ ಪ್ರಾಮಾಣಿಕತೆ ಹಾಗೂ ಮಾನವೀಯ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *