Breaking
24 Aug 2026, Mon

ಮುಡಿಪಿನಲ್ಲಿ ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ

ಮುಡಿಪು: ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಪಿ.ವಿ. ಪ್ರದೀಪ್ ಕುಮಾರ್ ಅವರ ಸಾರಥ್ಯದಲ್ಲಿ ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನವು ಮುಡಿಪು ಶ್ರೀ ಭಾರತೀ ಅನುದಾನಿತ ಶಾಲೆಯಲ್ಲಿ ಭಾನುವಾರ ನಡೆಯಿತು.

ಪತ್ರಕರ್ತ ಹಾಗೂ ಹಿರಿಯ ಸಾಹಿತಿ ಜಯಾನಂದ ಪೆರಾಜೆ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಡಾ. ಶಾಂತಾ ಪುತ್ತೂರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸ್ವರಚಿತ ಕವನ ವಾಚಿಸಿದರು.

ಕವಿಗೋಷ್ಠಿಯಲ್ಲಿ ರೇಖಾ ಸುದೇಶ್ ರಾವ್, ಸವಿತಾ ಕರ್ಕೇರ, ಮೋಹಿತಾ ಹೊಸ್ಮಠ, ಪುಷ್ಪ ಪ್ರಸಾದ್, ಸುಲೋಚನ ನವೀನ್, ಶೋಭಾ ದಿನೇಶ್ ಉದ್ಯಾವರ, ಅಪೂರ್ವ ಸಾಲಿಯಾನ್, ಕಸ್ತೂರಿ ಜಯರಾಮ್, ರಮ್ಯ ರಘುಪತಿ ಕೊಕ್ಕಡ, ಗಿರೀಶ್ ಉಪ್ಪಿನಂಗಡಿ, ಯಶೋಧಾ ಗಾಣಿಗ, ಅನಾರ್ಕಲಿ ಸಲೀಂ, ಸರಸ್ವತಿ ಕೋಟೇಶ್ವರ, ಶಂಶೀರ್ ಬುಡೋಳಿ, ಆಯಿಷಾ ಪೆರ್ನೆ, ವೀಣಾ ವಾಮಂಜೂರು, ಶುಭಾಷಿಣಿ ಕನ್ನಟ್ಟಿಪಾರೆ ಬೇಕೂರು, ದಿನೇಶ್ ಚೆಂಪಿ, ಅನಿತಾ ಶೆಣೈ, ಪ್ರಶಾಂತ್ ಆಚಾರ್ಯ, ದಿವ್ಯ ಮಯ್ಯ, ಸೋಮೇಶ್ ಕೆ., ಹೇಮಂತ್ ಕುಮಾರ್, ಸುಶ್ಮಿತಾ ಕಲಾಯಿ ಪುತ್ತೂರು, ಮಾಲತಿ ರಮೇಶ್, ದೀಪಿಕಾ ಉಡುಪಿ ಸೇರಿದಂತೆ ಹಲವು ಕವಿಗಳು ಸ್ವರಚಿತ ಕವನಗಳನ್ನು ವಾಚಿಸಿದರು.

ಕಥಾಬಿಂದು ಪ್ರಕಾಶನದ ಪಿ.ವಿ. ಪ್ರದೀಪ್ ಕುಮಾರ್ ಹಾಗೂ ಕನ್ನಡ ಭವನ ಕಾಸರಗೋಡು ಸಂಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಅವರು ಕವಿಗೋಷ್ಠಿಯ ಅಧ್ಯಕ್ಷರು ಹಾಗೂ ಅತಿಥಿಗಳನ್ನು ಗೌರವಿಸಿದರು. ಕವಿಗಳಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *