ವಿಟ್ಲ: ಬೋಳಂತೂರು ಸಮೀಪದ ನಾರ್ಶದ ಉದ್ಯಮಿ ಸುಲೈಮಾನ್ ಹಾಜಿ ಮನೆಯಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಸೋಗಿನಲ್ಲಿ ದರೋಡೆ ನಡೆಸಿದ ಪ್ರಕರಣಕ್ಕೆ ಬಳಸಿ ಕಾರನ್ನು ಬದಿಯಡ್ಕ ಸಮೀಪದಲ್ಲಿ ಪೊಲೀಸರು ವಶಕ್ಕೆ ಪಡೆದ ವಿಚಾರವನ್ನು ಪೊಲೀಸರು ನಿರಾಕರಿಸಿದ್ದಾರೆ.
ಬದಿಯಡ್ಕ ಸಮೀಪದ ನಿರ್ಜನ ಪ್ರದೇಶದಲ್ಲಿ ನಕಲಿ ನಂಬರ್ ಬಳಸಿದ ಕಾರು ಪತ್ತೆಯಾಗಿದ್ದು, ಪೊಲೀಸರು ಇದನ್ನು ವಶಕ್ಕೆ ಪಡೆದಿದ್ದಾರೆಂಬ ಮಾಹಿತಿ ಸೋಮವಾರ ಬೆಳಗ್ಗೆ ಎಲ್ಲೆಡೆ ಹರಡಿದೆ. ಕಲ್ಲಡ್ಕದಿಂದ ಮಂಗಳೂರು ಕಡೆಗೆ ಹೋದ ಕಾರು ಟೋಲ್ ಗೇಟ್ ಮೂಲಕ ಸಾಗಿ ಮತ್ತೆ ವಿಟ್ಲ ಕಡೆಗೆ ಆಗಮಿಸಿ ಪೆರ್ಲ ಬದಿಯಡ್ಕ ರಸ್ತೆಯಲ್ಲಿ ವಾಹನವನ್ನು ಬಿಟ್ಟು ಬೇರೆ ವಾಹನ ಬಳಸಿ ಪಲಾಯನ ಮಾಡಿರುವುದಾಗಿ ಸುದ್ದಿ ಹಬ್ಬಿಸಲಾಗಿತ್ತು.
ಆದರೆ ಪೊಲೀಸ್ ಇಲಾಖೆ ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದು, ಇನ್ನೂ ಕಾರು ಪತ್ತೆಯಾಗಿಲ್ಲ ಎಂದು ಹೇಳಿದೆ.ಕಾರಿನಲ್ಲಿ ಜಾಗ ಸಾಕಾದಷ್ಟು ನಗದು ಮನೆಯಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಹೇಳಿಕೆಯಲ್ಲಿ ಸದ್ಯ ೨೫ರಿಂದ ೩೦ಲಕ್ಷ ಎಂದು ದೂರಿನಲ್ಲಿ ಹೇಳಿದ್ದಾರೆ. ನಗದನ್ನು ಲೆಕ್ಕ ಮಾಡದ ಕಾರಣದಿಂದ ಅಂದಾಜು ಮೊತ್ತವನ್ನು ದಾಖಲಿಸಲಾಗಿದೆ ಎಂದು ಹೇಳಿದ್ದರು. ಕೋಟಿಗೂ ಮಿಕ್ಕಿ ನಗದು ದರೋಡೆ ಆಗಿದೆ ಎಂಬ ಸಾರ್ವಜನಿಕ ವಲಯದಲ್ಲಿ ಹರಿದ್ದು, ನೈಜ ಇಡಿ ಐಟಿ ದಾಳಿಯಾಗುವ ಭಯದಲ್ಲಿ ಮನೆ ಮಂದಿ ಕೂರುವಂತಾಗಿದೆ.




