ಮೈಸೂರು: ಇಲವಾಲ ಗ್ರಾಮ ಪಂಚಾಯಿತಿ ಸಮೀಪದಲ್ಲಿರುವ PGRSS ನಿರಾಶ್ರಿತರು ಮತ್ತು ವೃದ್ಧರ ಬೃಂದಾವನದಲ್ಲಿ ಜುಲೈ 17 ರಂದು ಲಯನ್ಸ್ ಆಫ್ ಮೈಸೂರು ಎಲೈಟ್ ಸಂಸ್ಥೆಯ ವತಿಯಿಂದ ಆಶ್ರಮದ ತಾಯಂದಿರಿಗೆ ದಿನಸಿ ಪದಾರ್ಥಗಳು ಹಾಗೂ ತರಕಾರಿಗಳನ್ನು ವಿತರಿಸಲಾಯಿತು.

ಈ ಸೇವಾ ಕಾರ್ಯಕ್ರಮದಲ್ಲಿ ಲಯನ್ಸ್ ಆಫ್ ಮೈಸೂರು ಎಲೈಟ್ ಸಂಸ್ಥೆಯ ಮಿಸ್ಟರ್ ಪಾರ್ಥ ಹಾಗೂ ಚಂದ್ರಿಕಾ ಪಾರ್ಥ, ಸಂಸ್ಥೆಯ ಅಧ್ಯಕ್ಷ ಹನುಮಂತಪ್ಪ ಮತ್ತು ಕಾರ್ಯದರ್ಶಿ ಸುರೇಶ್ ಭಾಗವಹಿಸಿ ಆಶ್ರಮದ ನಿವಾಸಿಗಳಿಗೆ ಅಗತ್ಯ ದಿನಸಿ ಸಾಮಗ್ರಿಗಳು ಹಾಗೂ ತರಕಾರಿಗಳನ್ನು ಹಸ್ತಾಂತರಿಸಿದರು.

ಈ ಸಮಾಜಮುಖಿ ಸೇವಾ ಕಾರ್ಯಕ್ಕೆ PGRSS ನಿರಾಶ್ರಿತರು ಮತ್ತು ವೃದ್ಧರ ಬೃಂದಾವನದ ಅಧ್ಯಕ್ಷ ಯಾದವ್ ಹರೀಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಕ್ತದಾನಿ ಮಂಜು ಹಾಗೂ ಎಲ್ಲಾ ನಿರ್ದೇಶಕರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಕೃತಜ್ಞತೆಗಳನ್ನು ಸಲ್ಲಿಸಲಾಯಿತು.




