Breaking
25 Sep 2026, Fri

ದೂರದೃಷ್ಟಿ ಇಲ್ಲದ, ಅನುಷ್ಠಾನಕ್ಕೆ ಬಾರದ ಲೆಕ್ಕಾಚಾರದ ಘೋಷಣೆಗಳ ಬಜೆಟ್ : ಪ್ರಭಾಕರ ಪ್ರಭು

ಬಂಟ್ವಾಳ: ದೂರ ದೃಷ್ಟಿ ಇಲ್ಲದ, ಅನುಷ್ಠಾನಕ್ಕೆ ಅಸಾಧ್ಯವಾದ ಕೇವಲ ಅಂದಾಜು ಲೆಕ್ಕಾಚಾರದ ಘೋಷಣೆಗಳು, ಮತ ಬೇಟೆಗಾಗಿ ಸೀಮಿತ ವರ್ಗದ ಓಲೈಕೆಗೆ ಉತ್ತೇಜನ, ಕರಾವಳಿ ಜನತೆಯ ಬಹುನಿರೀಕ್ಷೆಯ ಐಟಿ ಉದ್ದಿಮೆಗೆ ಕೊಕ್, ಅಸಂಬದ್ಧ ನಿಯಮ ಪ್ರಕಾರ ವಿಪರೀತ ತೆರಿಗೆ ಸಂಗ್ರಹದ ಗುರಿ, ಬೆಲೆ ಏರಿಕೆಯ ಮದ್ಯೆ ಎಫ್ ಸಿ ನವೀಕರಣದ ನೆಪದಲ್ಲಿ ರಿಕ್ಷಾ ಚಾಲಕರ ಹೊಟ್ಟೆಗೆ ಪೆಟ್ಟು, ಗ್ಯಾರಂಟಿ ಯೋಜನೆ ಮುಂದುವರಿಕೆಗಾಗಿ ಹಲವರ ಲೂಟಿ ಮಾಡಿ ಕೆಲವರ ಮೂಗಿಗೆ ಬೆಲ್ಲ, ಕೃಷಿ, ತೋಟಗಾರಿಕೆಗಳಿಗೆ ವಿಶೇಷ ಯೋಜನೆ ಪ್ರಕಟ ಮಾಡಿಲ್ಲ.

ಒಟ್ಟಿನಲ್ಲಿ ಮರುಪಾವತಿಗೆ ಸಾಧ್ಯವಾಗದ ಸಾಲದ ಸುಳಿಯಲ್ಲಿ ರಾಜ್ಯ ಸರ್ಕಾರದ ಈ ಸಲದ ಬಜೆಟ್ ಇದಾಗಿದೆ ಎಂದು ಪ್ರಭಾಕರ ಪ್ರಭು ತಿಳಿಸಿದ್ದಾರೆ.

Leave a Reply

Your email address will not be published. Required fields are marked *