Breaking
25 Sep 2026, Fri

ಜನೌಷಧಿ ದಿವಸ್ ಅಂಗವಾಗಿ ಸಿದ್ಧಕಟ್ಟೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬಂಟ್ವಾಳ: 8 ನೇ ಜನೌಷಧಿ ದಿವಸ್ ಪ್ರಯುಕ್ತ ಸಿದ್ಧಕಟ್ಟೆಯ ಜನೌಷಧಿ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವು ಮಾ. 1 ರಂದು ನಡೆಯಿತು.

ಆರೋಗ್ಯ ಶಿಬಿರದಲ್ಲಿ ಉಚಿತ ಬಿ.ಪಿ ಪರೀಕ್ಷೆ , ಮಧುಮೇಹ ಪರೀಕ್ಷೆ ಮತ್ತು ECG ತಪಾಸಣೆಯ ವ್ಯವಸ್ಥೆ ನುರಿತ ತಜ್ಞರಿಂದ ಕೈಗೊಳ್ಳಲಾಗಿದ್ದು ಉಚಿತ ತಪಾಸಣೆ, ಉಚಿತ ಜನೌಷಧಿ ಮಾತ್ರೆಗಳ ಪ್ರಯೋಜನ ವನ್ನು ಪಡೆಯಲು ಶಿಬಿರದಲ್ಲಿ 250ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಸ್ಥಳೀಯ ಅಂಗನವಾಡಿ ಕೇಂದ್ರಕ್ಕೆ ಪೌಷ್ಠಿಕ ಆಹಾರವನ್ನು ಸಂಸ್ಥೆಯ ವತಿಯಿಂದ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪೂಂಜ ಶ್ರೀಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ರತ್ನ ಕುಮಾರ್ ಚೌಟ , ಸಿ. ಎ ಬ್ಯಾಂಕ್ ಅಧ್ಯಕ್ಷರಾದ ಪ್ರಭಾಕರ ಪ್ರಭು, ಸಂಗಬೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸತೀಶ್ ಕುಮಾರ್ ಅಳಕೆ, ಕುಲಾಲ ಸಂಘ ಗಾಡಿಪಲ್ಕೆ ಇದರ ಗೌರವಾಧ್ಯಕ್ಷರಾದ ರಾಮಯ್ಯ ಕುಲಾಲ್ ಹಾಗೂ ಡಾ. ಮೂರ್ತಿ ಮತ್ತು ಡಾ.ದೀಕ್ಷಿತ್ ಉಪಸ್ಥಿತರಿದ್ದರು.

ಜನೌಷಧಿ ಕೇಂದ್ರ ಸಿದ್ಧಕಟ್ಟೆ ಇದರ ಮಾಲಕರಾದ ಮನೋಜ್ ಕುಲಾಲ್ ಬಸಬೈಲು ಇವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು. ಸಂಸ್ಥೆಯ ಉದ್ಯೋಗಿ ಮುಶೀನ ಇವರು ಕಾರ್ಯಕ್ರಮವನ್ನು ನಿರೂಪಿಸಿದರು, ಧನುಶ್ ವಂದಿಸಿದರು.

Leave a Reply

Your email address will not be published. Required fields are marked *