ಸಿದ್ದಕಟ್ಟೆ: ಅಡಿಕೆಯಿಂದ ಅರೋಗ್ಯಕ್ಕೆ ಹಾನಿಕಾರಕವಲ್ಲ ಎಂದೂ ವಿಶ್ವ ಸಂಸ್ಥೆಯ ಮನವರಿಕೆ ಮಾಡುವಂತೆ ಕೋರಿ ದಕ್ಷಿಣ ಕನ್ನಡ ಹಾಗೂ ಉಡುಪಿ ಸಂಸದದ್ವಯರಿಗೆ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಪತ್ರದ ಮೂಲಕ ವಿನಂತಿಸಿದ್ದಾರೆ.
ಕರ್ನಾಟಕ ರಾಜ್ಯದ ಕರಾವಳಿಯ ಜಿಲ್ಲೆಗಳಲ್ಲಿ ಹಲವಾರು ವರ್ಷಗಳಿಂದ ವಾಣಿಜ್ಯ ಬೆಳೆಯಾಗಿ ಬೆಳೆಸುತ್ತಿರುವ ತೋಟಾಗಾರಿಕೆ ಬೆಳೆಯಾಗಿರುವ ಅಡಿಕೆ ಬೆಳೆಯಿಂದಾಗಿ ರಾಜ್ಯದ ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿದ್ದು , ಈ ಬೆಳೆಯಿಂದಾಗಿ ದೇಶದ ಆರ್ಥಿಕತೆಗೂ ಶಕ್ತಿ ಬಂದಿರುತ್ತದೆ . ಕರಾವಳಿ ಜಿಲ್ಲೆಗಳಲ್ಲಿನ ಒಟ್ಟು ಭೂ ವಿಸ್ತಿರ್ಣದಲ್ಲಿ ಬಹುಪಾಲು ವಿಸ್ತಿರ್ಣ ಅಡಿಕೆ ಬೆಳೆಯಿಂದ ಕೂಡಿದ್ದು , ಬಹುಪಾಲು ರೈತರು ಅಡಿಕೆ ಬೆಳೆಯನ್ನು ಅವಲಂಬಿತರಾಗಿರುತ್ತಾರೆ . ಈ ಅಡಿಕೆ ಬೆಳೆಗಾರರಿಂದಲೇ ಕರಾವಳಿ ಜಿಲ್ಲೆಗಳು ಆರ್ಥಿಕವಾಗಿ ಸದೃಢಗೊಳ್ಳಲು ಕಾರಣವಾಗಿದೆ .
ವಿಷಯ ಹೀಗಿರುವಾಗ ದಿಢಿರನೆ ಎಂಬಂತೆ ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆಯೊಂದು ಅಡಿಕೆ ಸೇವನೆಯಿಂದ ಬಾಯಿಯ ಕ್ಯಾನ್ಸರ್ ಸಂಭವಿಸುತ್ತದೆ ಎಂದು ಅವೈಜ್ಞಾನಿಕವಾಗಿ ವರದಿ ನೀಡಿದ್ದು ಅಡಿಕೆ ಬೆಳೆಗಾರರು ತುಂಬಾ ಆತಂಕದ ಪರಿಸ್ಥಿತಿಯಲ್ಲಿದ್ದಾರೆ ಈ ಅಡಿಕೆ ಬಗ್ಗೆ ದೇಶದಲ್ಲಿ ಹಲವಾರು ಸಂಶೋಧನೆಗಳನ್ನೂ ನಡೆಸಲಾಗಿದ್ದು ಮತ್ತು ವಿವಿಧ ರೀತಿಯ ಪರೀಕ್ಷೆಗಳನ್ನು ಒಳಪಡಿಸಲಾಗಿದ್ದು ,ಎಲ್ಲಾ ಮೂಲಗಳಿಂದಲೂ ಅಡಿಕೆ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ಸಾಬೀತಾಗಿರುತ್ತದೆ.
ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಮತ್ತು ಆರೋಗ್ಯದಾಯಕವಾಗಿದೆ ಎಂಬುದಕ್ಕೆ ಸಂಶೋಧನೆಯಿಂದ ಪಡೆಯಲಾದ ಹಲವಾರು ಪೂರಕವಾದ ದಾಖಲೆಗಳು ಕರಾವಳಿಯ ಪ್ರತಿಷ್ಠಿತ ಅಡಿಕೆ ಖರೀದಿ ಕೇಂದ್ರವಾದ ಕ್ಯಾಂಪ್ಕೋ ಬಳಿ ಲಭ್ಯವಿದೆ.ಅಡಿಕೆಯಿಂದ ಕ್ಯಾನ್ಸರ್ ಬರುತ್ತದೆ ಎಂದು ಅಡಿಕೆಯನ್ನು ನಿಷೇಧಿಸಲು ಶಿಫಾರಸ್ಸು ಮಾಡಿರುವ ಅವೈಜ್ಞಾನಿಕ ಸಂಸ್ಥೆಗೆ ಈಗಾಗಲೇ ಹೆಚ್ಚಿನ ಸಂಖ್ಯೆಯ ಜನ ಸಾಮಾನ್ಯರು ದಿನ ನಿತ್ಯ ಉಪಯೋಗಿಸುವ ವಿಷಕಾರಿ ಕುಡಿಯುವ ಪಾನೀಯಗಳಾದ ಸ್ಪೈಟ್ ,ಕೊಕೊ ಕೋಲಾ , ಪಾಂಟ , ತಮ್ಸಪ್ , ಮಿರಿಂಡ ಹಾಗೂ ಮದ್ಯಪಾನ ಸೇವನೆ ಸೇರಿದಂತೆ ಇನ್ನಿತರ ಆರೋಗ್ಯಕ್ಕೆ ಹಾನಿಕಾರಕವಾದವುಗಳನ್ನು ನಿಷೇಧ ಮಾಡಲು ಆಗುವುದಿಲ್ಲವೇ ಆದುದರಿಂದ ಧಾರ್ಮಿಕ ಸಂಪ್ರದಾಯದಿಂದ ಹಿಡಿದು ದೇವತಾ ಕಾರ್ಯಗಳಿಗೆ ಸಹ ಅಡಿಕೆಯನ್ನು ಬಳಸಲಾಗುತ್ತಿದ್ದು ಅಡಿಕೆಯಿಂದ ಯಾವುದೇ ಹಾನಿಕಾರಕ ಉದ್ಬವಿಸುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಗೆ ಮನವರಿಕೆ ಮಾಡಿಕೊಳ್ಳಲು ದೇಶದ ಪ್ರಧಾನ ಮಂತ್ರಿ ಹಾಗೂ ಸಂಬಂಧಿಸಿದ ಕೇಂದ್ರ ಸಚಿವರುಗಳಿಗೆ ಮನದಟ್ಟು ಮಾಡಲು ಈ ಮೂಲಕ ತಮಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಸಿದ್ದಾರೆ.