Breaking
26 Sep 2026, Sat

ಹಸುವಿಗೆ ಲಾರಿ ಡಿಕ್ಕಿ : ಗಂಭೀರ ಗಾಯ

ಬಂಟ್ವಾಳ: ರಸ್ತೆ ಬದಿಯಲ್ಲಿ ಹೋಗುತ್ತಿರುವ ಹಸುವೊಂದಕ್ಕೆ ಲಾರಿ ಡಿಕ್ಕಿ ಹೊಡೆದು ಹಸು ಗಂಭೀರವಾಗಿ ಗಾಯಗೊಂಡ ಘಟನೆ ಬಿ ಮೂಡ ಗ್ರಾಮದ ಬ್ರಹ್ಮರ್ಷಿ ನಾರಾಯಣ ಗುರು ಸಭಾ ಭವನದ ಬಳಿ ಇಂದು(ಡಿ.19) ನಡೆದಿದೆ.

ಹಸುವನ್ನು ಕಂಡ ಸ್ಥಳೀಯರು ಕೂಡಲೇ ಪ್ರಾಥಮಿಕ ಆರೈಕೆ ಮಾಡಿ, ನಂತರ ಪಶು ಆರೋಗ್ಯ ಕೇಂದ್ರದ ಅಧಿಕಾರಿ ಯವರಿಗೆ ತಿಳಿಸಿದ್ದು, ಸ್ಥಳಕ್ಕೆ ಬಂದ ಪಶು ವೈದ್ಯರು ಚಿಕಿತ್ಸೆ ನೀಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ದನ ಕರುಗಳನ್ನು, ಸಂಬಂಧ ಪಟ್ಟವರು ರಸ್ತೆಯಲ್ಲಿ ತಿರುಗಾಡಲು ಬಿಡದೇ ತಮ್ಮ ಭದ್ರತೆಯಲ್ಲಿ ಸಲಹುವಂತೆ, ಹಾಗೂ ಸಾಕು ಪ್ರಾಣಿಗಳನ್ನು ರಸ್ತೆಯಲ್ಲಿ ಬಿಡುವುದು ಕಾನೂನು ಪ್ರಕಾರ ಅಪರಾಧ ಎಂದು ಸಾವ೯ಜನಿಕರಿಗೆ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *