ಡಿ. 21: ಕಲ್ಲಡ್ಕದ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ

ಬಂಟ್ವಾಳ: ಕಲ್ಲಡ್ಕದ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಡಿ. 21 ರಂದು ಹೊನಲು ಬೆಳಕಿನ ಕ್ರೀಡೋತ್ಸವವು ನಡೆಯಲಿದೆ.

ಈ ಕ್ರೀಡೋತ್ಸವ ಸಮಾರಂಭದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಜೆ 5 ಗಂಟೆಗೆ ಅತಿಥಿ ಗಣ್ಯರ ಸಮ್ಮುಖದಲ್ಲಿ ಕ್ರೀಡೋತ್ಸವ ಉದ್ಘಾಟನೆಗೊಳ್ಳಲಿದ್ದು ಮುಖ್ಯ ಅತಿಥಿಗಳಾಗಿ ಮೈಸೂರಿನ ರಾಜವಂಶಸ್ಥರು ಮೈಸೂರು ಸಂಸ್ಥಾನ ಮತ್ತು, ಮಾನ್ಯ ಲೋಕಸಭಾ ಸದಸ್ಯ ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಒಡೆಯರ್, ಚಲನಚಿತ್ರ ನಟ, ನಿರ್ಮಾಪಕ, ಚಿತ್ರಕತೆಗಾರ ಹಾಗೂ ಪತ್ರಕರ್ತರಾದ ಪ್ರಕಾಶ್ ಬೆಳವಾಡಿ, ಉತ್ತರಪ್ರದೇಶದ ಲಕ್ನೋ M/s ಬ್ರಹ್ಮವರ್ಧ ಗ್ರೂಪ್ ಚೇರ್ ಮೆನ್ ಮನೋಜ್ ಸಿಂಗ್, ಕೇರಳ ತಿರುವನಂತಪುರಂ SUT ಪಟ್ಟಂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಚೇರ್ ಮೆನ್ ಸೀಮಾ ಬಿ ಆರ್ ಶೆಟ್ಟಿ, ಉತ್ತರಪ್ರದೇಶ ಲಕ್ನೋ ಹಿಂದುಸ್ತಾನ್ ಟೈಮ್ಸ್ ಸೀನಿಯರ್ ಅಸೋಸಿಯೇಟ್ ಎಡಿಟರ್ ಉಮೇಶ್ ರಘುವಂಶಿ, ಮುಂಬೈ MVIRDC ವರ್ಲ್ಡ್ ಟ್ರೇಡ್ ಸೆಂಟರ್ ಚೇರ್ ಮೆನ್ ವಿಜಯ ಜಿ. ಕಲಾಂತ್ರಿ, ಬೆಂಗಳೂರು M/s ಎಲೆಗನ್ಸ್ ಎಂಟರ್ಪ್ರೈಸಸ್ ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕಾಂತ್, ಮಂಗಳೂರು ಎ. ಬಿ. ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಪ್ರೊಫೆಸರ್ ಶಿಶಿರ ಶೆಟ್ಟಿ, ಉಡುಪಿ ಶ್ರೀ ಕೃಷ್ಣ ಪ್ರಸಾದ್ ಗ್ರೂಪ್(SKP GROUP) ಚೇರ್ ಮೆನ್ ಸಂಪತ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಜೆ 6 ಗಂಟೆಯಿಂದ ಶಿಶು ನೃತ್ಯ, ಸಂಚಲನ, ಘೋಷ್ ಪ್ರದರ್ಶನ, ಜಡೆಕೋಲಾಟ, ನಿಯುದ್ಧ, ದೀಪಾವಾರತಿ, ಯೋಗಾಸನ, ಪ್ರಾರ್ಥಮಿಕ ಸಾಮೂಹಿಕ, ನೃತ್ಯ ಭಜನೆ, ಮಲ್ಲಕಂಬ, ತಿರುಗುವ ಮಲ್ಲಕಂಬ, ಟಿಕ್ ಟಿಕ್ ಪ್ರದರ್ಶನ, ಚೆಂಡೆ, ನೃತ್ಯ ವೈವಿಧ್ಯ , ಬೆಂಕಿ ಸಾಹಸ, ಸಮತೋಲನ, ಕಾಲ್ಚಕ್ರ , ಕೂಪಿಕಾ, ಪ್ರೌಡ ಸಾಮೂಹಿಕ ವಿಶೇಷ ಕಾರ್ಯಕ್ರಮಗಳು ಮೂಡಿಬರಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಪ್ರಸಾದ್ ಕಾಯರ್ ಕಟ್ಟೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *