Breaking
23 Mar 2026, Mon

ಕುಡ್ಲ ಟ್ರೋಫಿ ಕ್ರಿಕೆಟ್ ಪಂದ್ಯಾಟ: ಸಂತ ಸೆಬೆಸ್ಟಿಯನ್ ಪೆರ್ಮನ್ನುರ್ ಚಾಂಪಿಯನ್

ವಾಮಂಜೂರು: ಸಂತೋಷನಗರ ಮೈದಾನದಲ್ಲಿ ಡಿಸೆಂಬರ್ 13 ಮತ್ತು 14ರಂದು ಎರಡು ದಿನಗಳ ಅಂಡರ್‌ಆರ್ಮ್ ʼಕುಡ್ಲ ಟ್ರೋಫಿ ಕ್ರಿಕೆಟ್ ಪಂದ್ಯಾಟʼ ಯಶಸ್ವಿಯಾಗಿ ನಡೆಯಿತು.

ಎಸ್‌.ಜೆ.ಸಿ. ಫ್ರೆಂಡ್ಸ್ ವಾಮಂಜೂರು, ರೊ. ಇಂಟರ್‌ನ್ಯಾಷನಲ್ ಹಾಗೂ ಗಜಾನನ ಕ್ರಿಕೆಟರ್ಸ್ (ಪ್ರಜ್ವಲ್ ಫಿಲ್ಮ್ಸ್) ಇವರ ಪ್ರಾಯೋಜಕತ್ವದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಚರ್ಚ್ ಹಂತದ ಈ ಪಂದ್ಯಾಟದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಚರ್ಚ್‌ಗಳಿಂದ ಒಟ್ಟು 19 ತಂಡಗಳು ಭಾಗವಹಿಸಿದ್ದವು.

ಅಂತಿಮ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಸಂತ ಸೆಬೆಸ್ಟಿಯನ್ ಪೆರ್ಮನ್ನುರ್ ಕ್ರಿಕೆಟ್ ತಂಡವು ಕುಡ್ಲ ಟ್ರೋಫಿಯನ್ನು ತನ್ನದಾಗಿಸಿಕೊಂಡು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಟೀಂ ಪಾಲಡ್ಕಾ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

ಪಂದ್ಯಾಟದಲ್ಲಿ ಅಂಪೈರ್‌ಗಳಾಗಿ ಆಗಿ ರಾಜೇಶ್ ಪಡಿಲ್, ಸೈಫ್ ಬಜಾಲ್, ರಂಜೇಶ್ ಉಚಿಲ್, ಆರಿಫ್ ಜೋಕಟ್ಟೆ ಹಾಗೂ ಅಶ್ವತ್ ಕುಂಪಲ ನಿಯಮಾನುಸಾರವಾಗಿ ಕರ್ತವ್ಯ ನಿರ್ವಹಿಸಿದರು.

ರಾಜೇಶ್ ಪೆರೇರಾ ಹಾಗೂ ಸಯ್ಯಾದ್ ಗುರುಕಂಬಳ ಅವರು ಪಂದ್ಯಾಟದ ಕಾಮೆಂಟ್ರಿ ನೀಡಿದರು.
ರೋಹನ್ ವಾಮಂಜೂರು, ಸೋಹನ್, ರೊಲ್ವಿನ್, ಮಧು, ಪ್ರಜ್ನಾ ಹಾಗೂ ಸ್ವೀಟಿ ಅವರ ಸಮರ್ಥ ಮುಂದಾಳತ್ವ ಮತ್ತು ಉತ್ತಮ ವ್ಯವಸ್ಥೆಯೊಂದಿಗೆ ಪಂದ್ಯಾಟ ಅಂತಿಮಗೊಂಡಿತು.

Leave a Reply

Your email address will not be published. Required fields are marked *