Breaking
23 Mar 2026, Mon

ಕಾರು ಮತ್ತು ಬಸ್ಸಿನ ನಡುವೆ ಭೀಕರ ಅಪಘಾತ: ಇಬ್ಬರು ಮೃತ್ಯು, ಓವ೯ನಿಗೆ ಗಂಭೀರ ಗಾಯ

ಕೇರಳ: ಕಾರು ಮತ್ತು ಬಸ್ಸಿನ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ಕೊಲ್ಲಂ ಎಂಬಲ್ಲಿ ನಡೆದಿದೆ.

ಮೃತರನ್ನು ತಿರುವನಂತಪುರದ ಪೂಜಾಪುರದ ನೆಡುಂಪುರಂ ನಿವಾಸಿ ಬಿಜು ಚಂದ್ರಶೇಖರನ್ (38) ಮತ್ತು ಅವರ ಸ್ನೇಹಿತ ಸತೀಶ್ (45) ಎಂದು ಗುರುತಿಸಲಾಗಿದೆ.

ಶಬರಿಮಲೆಗೆ ಭೇಟಿ ನೀಡಿ ಹಿಂತಿರುಗುತ್ತಿದ್ದ ಕಾರು ತಿರುವನಂತಪುರದಿಂದ ಕೊಟ್ಟಾರಕ್ಕರಕ್ಕೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಬಿಜು ಚಂದ್ರಶೇಖರನ್ ಮತ್ತು ಅವರ ಸ್ನೇಹಿತ ಸತೀಶ್ ಹಾಗೂ ಬಿಜು ಅವರ ಮಗ ದೇವಪ್ರಕಾಶ್ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಬಿಜು ಅವರ ಮಗ ದೇವಪ್ರಕಾಶ್ ಅವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *