ಕಾಸರಗೋಡು: ವಿದ್ಯಾರ್ಥಿಯೋರ್ವ ತನ್ನ ಮಲಗುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊ೦ಡ ಘಟನೆ ಕಾಸರಗೋಡಿನ ಮುಳ್ಳೇರಿಯ ಎಂಬಲ್ಲಿ ಡಿ. 15ರಂದು ನಡೆದಿದೆ.
ಮೃತ ಬಾಲಕನನ್ನು ಬೆಳ್ಳೂರು ಕುಂಜತೊಟ್ಟಿಯ ಪ್ರಜ್ವಲ್ (14) ಎಂದು ಗುರುತಿಸಲಾಗಿದೆ.

ಪ್ರಜ್ವಲ್ ಬೆಳ್ಳೂರು ಪ್ರೌಢಶಾಲೆಯ ಒ೦ಬತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಶಾಲೆಯಲ್ಲಿ ಪರೀಕ್ಷೆ ಇದ್ದ ಕಾರಣ ಮಧ್ಯಾಹ್ನ ಮನೆಗೆ ಬಂದಿದ್ದನು. ಈತನ ಸಹೋದರಿ ಮುಳ್ಳೇರಿಯಾದ ಶಾಲೆಯೊಂದರಲ್ಲಿ ಓದುತ್ತಿದ್ದು ಮನೆಯವರು ಆಕೆಯನ್ನು ಕರೆದುಕೊಂಡು ಬರಲು ಅಲ್ಲಿಗೆ ಹೋಗಿದ್ದರು. ಅವರು ಪುನಃ ಮನೆಗೆ ಬಂದು ನೋಡಿದಾಗ ಪ್ರಜ್ವಲ್ ತನ್ನ ಮಲಗುವ ಕೋಣೆಯಲ್ಲಿರುವ ಫ್ಯಾನ್ ಗೆ ನೇಣು ಹಾಕಿ ನೇತಾಡುತ್ತಿರುವುದು ಕಂಡು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಈ ಬಗ್ಗೆ ಆದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






