ಕಾಕ೯ಳ: ಗೋ ನಂದಿ ಸೇವಾದಳ ಕರ್ನಾಟಕ ಇದರ ರಾಜ್ಯ ಮಹಿಳಾ ಸಂಚಾಲಕಿಯಾಗಿ ಕಾರ್ಕಳದ ರಮಿತಾ ಸೂರ್ಯವಂಶಿ ಆಯ್ಕೆಯಾಗಿದ್ದಾರೆ.

ಗೋವಿನ ರಕ್ಷಣೆ ಮತ್ತು ಪೋಷಣೆ ಮುಖ್ಯವಾಗಿ ಆಗಬೇಕಿದ್ದು, ಈ ಚಟುವಟಿಕೆ ದೇಶಾದ್ಯಂತ ಮಾಡುವ ಉದ್ದೇಶದಿಂದ ಹಾಗೂ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಮಹಿಳಾ ಜಾಗೃತಿ ಕಾರ್ಯಕ್ರಮದ ಅಗತ್ಯ ಇರುವುದರಿಂದ ತಂಡದ ರಾಜ್ಯ ಮಹಿಳಾ ಸಂಚಾಲಕಿಯಾಗಿ ಕಾರ್ಕಳದ ರಮಿತಾ ಸೂರ್ಯವಂಶಿಯವರನ್ನು ಆಯ್ಕೆಗೊಳಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಮಹಿಳೆಯರಲ್ಲಿ ಸೇವಾ ಮನೋಭಾವನೆಯ ಜೊತೆ ಹೋರಾಟ ಮನೋಭಾವನೆ ಬೆಳೆಸುವಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡುವೆ ಎಂದು ತಿಳಿಸಿದ್ದಾರೆ.




