ಕಟೀಲು: ತೆಂಗಿನಕಾಯಿ ಕೀಳಲು ಯಂತ್ರದ ಸಹಾಯದಿಂದ ಮರಕ್ಕೆ ಏರಿದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮರದಲ್ಲೇ ಮೃತಪಟ್ಟ ಘಟನೆ ಕಟೀಲು ಜಲಕದ ಕಟ್ಟೆ ಸಮೀಪ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಜಯರಾಮ ಶೆಟ್ಟಿ(75) ಎಂದು ಗುರುತಿಸಲಾಗಿದೆ.

ಡಿಸೆಂಬರ್ 10ರಂದು ತಮ್ಮ ಜಮೀನಿನಲ್ಲಿರುವ ತೆಂಗಿನಮರಕ್ಕೆ ಯಂತ್ರದ ಸಹಾಯದಿಂದ ಏರಿದ್ದ ಜಯರಾಮ ಶೆಟ್ಟಿಗೆ ಅಲ್ಲಿಯೇ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ. ಘಟನೆ ನಡೆದ ವೇಳೆ ಸುತ್ತಮುತ್ತ ಯಾರೂ ಇರದ ಕಾರಣ ಇದು ಗಮನಕ್ಕೆ ಬಂದಿರಲಿಲ್ಲ. ಸಂಜೆ ತೆಂಗಿನಮರದಲ್ಲಿ ವ್ಯಕ್ತಿ ನೇತಾಡಿರುವುದನ್ನು ಸ್ಥಳೀಯರು ಕಂಡು ಅಗ್ನಿಶಾಮಕ ದಳ ಹಾಗೂ ಬಜ್ಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯವರು ಮೃತ ದೇಹವನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಗಿದೆ.
ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.




