Breaking
26 Sep 2026, Sat

ಆಯತಪ್ಪಿ ಬಾವಿಗೆ ಬಿದ್ದ ವ್ಯಕ್ತಿ: ಅಗ್ನಿಶಾಮಕ ದಳದ ಸಿಬ್ಬಂದಿಯವರಿಂದ ರಕ್ಷಣೆ

ಕಾರ್ಕಳ: ಬಾವಿಗೆ ಅಡ್ಡವಾಗಿ ಅಳವಡಿಸಲಾಗಿದ್ದ ಕಂಬ ಮುರಿದುಬಿದ್ದ ಪರಿಣಾಮ ನೀರುಸೇದುತ್ತಿದ್ದ ವ್ಯಕ್ತಿಯೋರ್ವರು ಬಾವಿಯೊಳಗೆ ಬಿದ್ದ ಘಟನೆ ಸಾಣೂರಿನ ಮಠದಕೆರೆ‌ ಎದುರುಭಾಗದ ಕೆಂಚಬೆಟ್ಟು ಎಂಬಲ್ಲಿ ನ.24ರಂದು ಸಂಭವಿಸಿದೆ.

ಜೀವಾಪಾಯದಿಂದ ಪಾರಾದ ವ್ಯಕ್ತಿಯನ್ನು ಪ್ರಶಾಂತ್‌ ಭಂಡಾರಿ (40) ಎಂದು ಗುರುತಿಸಲಾಗಿದೆ.

ಮನೆ ಮಂದಿ ನೀಡಿದ ಮಾಹಿತಿಯನ್ವಯ ಅಗ್ನಿಶಾಮಕ ದಳದ ಸಿಬ್ಬಂದಿಯರು ಕಾರ್ಯಚರಣೆ ನಡೆಸಿ, ಪ್ರಶಾಂತ್‌ ಭಂಡಾರಿ ಅವರನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *