Breaking
10 May 2026, Sun

ನಂದಾವರ: ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರದ ಶ್ರೀ ದೇವರಿಗೆ ಸಜೀಪ ಮಾಗಣೆ ವತಿಯಿಂದ ಸಾಮೂಹಿಕ ಸೀಯಾಳಾಭಿಷೇಕ

ನಂದಾವರ: ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರ ನಂದಾವರದಲ್ಲಿ ಕಾರ್ತಿಕ ಮಾಸದ ಕೊನೆ ಸೋಮವಾರವಾದ ಇಂದು ಪೂರ್ವ ಶಿಷ್ಟ ಸಂಪ್ರದಾಯದಂತೆ ಸಜೀಪ ಮಾಗಣೆ ವತಿಯಿಂದ ಶ್ರೀ ಗಣಪತಿ ದೇವರಿಗೆ ಸಾಮೂಹಿಕ ಸೀಯಾಳಾಭಿಷೇಕ ಶ್ರದ್ಧಾ ಭಕ್ತಿಯಿಂದ ಜರಗಿತು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎ0. ಸುಬ್ರಹ್ಮಣ್ಯ ಭಟ್, ಪ್ರಧಾನ ಅರ್ಚಕ ಮಹೇಶ್ ಕುಮಾರ್ ಭಟ್, ಮುನೂರು ಮಾಗಣೆ ತಂತ್ರಿ ಎಂ ಸೂರ್ಯನಾರಾಯಣ ಭಟ್, ಗಡಿ ಪ್ರಧಾನರಾದ ಶಶಿಧರ ರೈ ಯಾನೆ ನಾರಣ ಆಳ್ವ, ಮುತ್ತಣ್ಣ ಶೆಟ್ಟಿ ಯಾನೆ ಕಾಳಪ್ಪ ಶೆಟ್ಟಿ, ಕೋಟಿ ಮಾರ್ಥಯಾನೆ ಮಂಜುನಾಥ ರೈ, ದುಗ್ಗಪ್ಪ ಭಂಡಾರಿ ಯಾನೆ ಗಂಗಾಧರ ಭಂಡಾರಿ ಆಳ್ವಾವರ ಪಾಲು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ ಪ್ರಭಾಕರ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ, ಸಮಿತಿ ಸದಸ್ಯರಾದ ದೇವಿ ಪ್ರಸಾದ್ ಪೂಂಜಾ ಕಾಂತಾಡಿ ಗುತ್ತು, ಶಿವರಾಮ ಭಂಡಾರಿ ಬಿಜಂದಾರು ಗುತ್ತು, ಚಂದ್ರಶೇಖರ ನಾಯಕ್ ಕಾಂತಾಡಿ ಗುತ್ತು, ಜಯರಾಮ ಶೆಟ್ಟಿ ನಗ್ರೀ ಗುತ್ತು, ಕೊಚು ಪೂಜಾರಿ ಯಾನೆ ಶಂಕರ ಪೂಜಾರಿ, ದಯಾನಂದ ಪೂಜಾರಿ ಯಾನೆ ಕು0ಜ್ಞ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *