Breaking
10 May 2026, Sun

ದೇರಳಕಟ್ಟೆಯಲ್ಲಿ ಕಾಲೇಜಿನ ವಿದ್ಯಾರ್ಥಿ ನಾಪತ್ತೆ

ಮಂಗಳೂರು: ದೇರಳಕಟ್ಟೆಯ ಖಾಸಗಿ ಕಾಲೇಜಿನ ಬಿಎನ್‌ವೈಎಸ್ ಅಧ್ಯಯನ ಮಾಡುತ್ತಿದ್ದು ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ನ.13 ರಂದು ನಡೆದಿದೆ.

ನಾಪತ್ತೆಯಾದ ವಿದ್ಯಾರ್ಥಿಯನ್ನು ಕೇರಳದ ಪಾಲಕ್ಕಾಡ್ ಮೂಲದ ರಬಿಯಾ ಮತ್ತು ಅಬೂಬಕರ್ ಅವರ ಪುತ್ರ ಮಲಿಕ್ ಅಬೂಬಕರ್ ಎಂದು ಗುರುತಿಸಲಾಗಿದೆ.

ಅಬ್ದುಲ್ ಷರೀಫ್ ಅವರಿಗೆ ಸೇರಿದ ಪಿಜಿ ವಸತಿಯಲ್ಲಿ ವಾಸಿಸುತ್ತಿದ್ದ ಈತ ನ. 13ರ ರಾತ್ರಿ ಊಟಕ್ಕೆ ಹೊರಗೆ ಹೋಗಿದ್ದು , ನಂತರ ಹಿಂತಿರುಗದೆ ನಾಪತ್ತೆಯಾಗಿದ್ದಾನೆ.

ಮಲಿಕ್‌ನ ಸೋದರಮಾವ ಹಾಗೂ ಫಿಸಿಯೋಥೆರಪಿ ವೈದ್ಯರಾದ ಅಜ್ಮಲ್ ಟಿ.ಎ. ಅವರು ನೀಡಿದ ದೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *