Breaking
10 May 2026, Sun

ಸುರತ್ಕಲ್‌ನಲ್ಲಿ ಸಿಎನ್‌ಜಿ ಟ್ಯಾಂಕರ್‌ ಸೋರಿಕೆ

ಸುರತ್ಕಲ್: ಸಿಎನ್‌ಜಿ ಸಾಗಾಟ ಮಾಡುತ್ತಿದ್ದ ಟ್ಯಾಂಕರ್‌ಒಂದರಲ್ಲಿ ಸೋರಿಕೆ ಉಂಟಾಗಿ ಸ್ಥಳೀಯರು ಆತಂಕಗೊಂಡ ಘಟನೆ ಮಂಗಳೂರು ಹೊರವಲಯದ ಸುರತ್ಕಲ್‌ ಜಂಕ್ಷನ್‌ ಹರ್ಷ ಶೋರೂಮ್‌ ಬಳಿ ನ. 14 ರ ರಾತ್ರಿ ನಡೆದಿದೆ.

ಬೈಕಂಪಾಡಿ ಗೈಲ್‌ ಪಂಪಿನಿಂದ ಸಿಎನ್‌ ಜಿ ತುಂಬಿಸಿಕೊಂಡ ಟ್ಯಾಂಕರ್‌ ಸುರತ್ಕಲ್‌ ಕಡೆ ಬರುತ್ತಿದ್ದಂತೆ ಆಕಸ್ಮಿಕವಾಗಿ ಅನಿಲ ಸೋರಿಕೆಯಾಗಿದೆ ಎನ್ನಲಾಗಿದೆ. ಚಾಲಕ ತಕ್ಷಣ ಹೆದ್ದಾರಿ ಬದಿ ನಿಲ್ಲಿಸಿ ಅಪಾಯದ ಮುನ್ಸೂಚನೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸುರತ್ಕಲ್‌ ಪೊಲೀಸರು ಮತ್ತು ಮಂಗಳೂರು ಉತ್ತರ‌ ಸಂಚಾರ ವಿಭಾಗದ ಪೊಲೀಸರು ಹೆದ್ದಾರಿಯ ಎರಡೂ ಭಾಗದಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ದೂರದಲ್ಲೆ ತಡೆದು ನಿಲ್ಲಿಸಿದರು. ಸದ್ಯ ಈ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *