ಕಾಸರಗೋಡು: ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು, ಆಟದಲ್ಲಿ ನಿರತರಾಗಿದ್ದ 10 ಮಂದಿಯನ್ನು ಬಂಧಿಸಿದ ಘಟನೆ ಕಾಸರಗೋಡು ಜಿಲ್ಲೆಯ ನೀರ್ಚಾಲು ಎಂಬಲ್ಲಿ ನ. 14ರಂದು ನಡೆದಿದೆ.

ಬಂಧಿತ ಆರೋಪಿಗಳನ್ನು ಮೊಗ್ರಾಲು ನಿವಾಸಿ ಅಬ್ದುಲ್ ರಹಿಮಾನ್ (60), ಮಞ೦ಪಾರ ನಿವಾಸಿ ಮುಹಮ್ಮದ್ ಹನೀಪಲ (52), ಮಾನ್ಯ ನಿವಾಸಿ ಮುಹಮ್ಮದ್ ಶಾಫಿ(44), ಚಂದ್ರಂಪಾರ ನಿವಾಸಿ ಅನೀಶ್ ಜೋಸೆಫ್(38), ನೀರ್ಚಾಲು ಕಾಕುಂಜೆ ನಿವಾಸಿ ನವೀನ್(40), ಕೊಲ್ಲಂಗಾನ ನಿವಾಸಿ ಬ್ಯಾಪ್ಟಿಸ್ಟ್ ಮೊಂಥೇರೊ(53), ಮಾನ್ಯ ದೇವರಕೆರೆ ನಿವಾಸಿ ಉದಯ(50), ಉಕ್ಕಿನಡ್ಕ ನಿವಾಸಿ ಮುಹಮ್ಮದ್ ಸುಲೈಮಾನ್(48), ನೆಕ್ರಾಜೆ ಬಳಿಯ ಅಬ್ದುಲ್ ರಹಮಾನ್(54), ಪುಲ್ಲೂರು ಪೆರಿಯ ನಿವಾಸಿ ಮಣಿಕಂಠ(53) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಪೊಲೀಸರು 14,920 ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





