Breaking
26 Sep 2026, Sat

ಬಡ ಕುಟುಂಬದ ಕುಸುಮ ಮದುವೆಗೆ ಕುಲಾಲ–ಕುಂಬಾರ ಯುವ ವೇದಿಕೆ ವತಿಯಿಂದ ಆರ್ಥಿಕ ನೆರವು

ಬಂಟ್ವಾಳ: ಮಂಚಿ-ಕೈಯೂರಿನ ಬಡ ಕುಟುಂಬದ ಕುಸುಮ ಇವರ ಮದುವೆ ಕಾರ್ಯಕ್ರಮಕ್ಕಾಗಿ ಅವರು ಕೇಳಿಕೊಂಡಿದ್ದ ಆರ್ಥಿಕ ನೆರವಿನ ಪ್ರಕಾರ ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ಬಂಟ್ವಾಳ ವಿಧಾನಸಭಾ ಕ್ಷೇತ್ರ ವೇದಿಕೆಯ ಪರವಾಗಿ ಸಂಗ್ರಹಿಸಲಾದ 10,000 ರೂಪಾಯಿಯನ್ನು ಇಂದು(ನ. 14 ) ಅವರ ಮನೆಗೆ ತೆರಳಿ ಹಣವನ್ನು ಹಸ್ತಾಂತರಿಸಿ ಮದುವೆಗೆ ಆಶೀರ್ವದಿಸಲಾಯಿತು.

ಈ ಸಂಧರ್ಭದಲ್ಲಿ ಬಂಟ್ವಾಳ ಯುವ ವೇದಿಕೆಯ ಅಧ್ಯಕ್ಷರಾದ ಸುಮಿತ್ ಸಾಲ್ಯಾನ್ ಸೊರ್ನಾಡು, ಪ್ರಧಾನ ಕಾರ್ಯದರ್ಶಿ ಜಯ ಗಣೇಶ್ ಬಂಗೇರ , ರಾಜ್ಯ ಉಪಾಧ್ಯಕ್ಷ ಮಾಧವ ಕುಲಾಲ್ ಬಿ.ಸಿ ರೋಡ್, ವಿಭಾಗಿಯ ಅಧ್ಯಕ್ಷರಾದ ಸುಕುಮಾರ್ ಬಂಟ್ವಾಳ, ಗೌರವ ಸಲಹೆಗಾರರಾದ ಟಿ.ಸೇಷಪ್ಪ ಮಾಸ್ಟರ್, ಗಣೇಶ್ ತುಂಬೆ, ಪುರುಷೋತ್ತಮ ಪಣೋಲಿಬೈಲ್, ಮತ್ತು ವಿಜಯಶ್ರೀ ಪುರುಷೋತ್ತಮ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *