Breaking
23 Mar 2026, Mon

ರಾಡ್ ನಿಂದ ತಲೆಗೆ ಹಲ್ಲೆ ಪ್ರಕರಣ: ಇಬ್ಬರ ಬಂಧನ

ಕಾಸರಗೋಡು: ತಲವಾರಿನಿಂದ ಇರಿದು ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಗಾಯಗೊಳಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕೇರಳ ನಿವಾಸಿಗಳಾದ ಹಮೀದ್(56) ಮತ್ತು ಅಲ್ತಾಫ್(29) ಎಂದು ಗುರುತಿಸಲಾಗಿದೆ.

2021 ರಲ್ಲಿ ಕೇಸಿಗೆ ಸ೦ಬ೦ಧಿಸಿದ ಘಟನೆ ನಡೆದಿತ್ತು. ಕಾಸರಗೋಡು ಜಿಲ್ಲೆಯ ನಿವಾಸಿಗಳಾದ ಮುನೀರ್, ಸಮೀರ್ ಎಂಬವರಿಗೆ ಆರೋಪಿಗಳು ತಲವಾರಿನಿಂದ ಇರಿದು ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಗಾಯಗೊಳಿಸಿ, ಆ ಬಳಿಕ ಆರೋಪಿಗಳು ಘಟನಾ ಸ್ಥಳದಿಂದ ಪರಾರಿಯಾಗಿದ್ದರು.

ಉಡುಪಿ ಬಳಿಯ ಹೆಬ್ರಿಯಲ್ಲಿ ಆರೋಪಿಗಳು ಅಡಗಿ ಕುಳಿತಿದ್ದಾರೆಂಬ ಮಾಹಿತಿಯನ್ವಯ ಅಂಬಲತ್ತರ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *