Breaking
22 Sep 2026, Tue

ಅಡವು ಇರಿಸಿದ ಚಿನ್ನಾಭರಣಗಳನ್ನು ವಾಪಾಸು ಬಿಡಿಸಿಕೊಡದೇ ಮೋಸ: ಪ್ರಕರಣ ದಾಖಲು

ಕಾರ್ಕಳ: ಅಡವು ಇರಿಸಿದ ಚಿನ್ನಾಭರಣಗಳನ್ನು ವಾಪಾಸು ಬಿಡಿಸಿಕೊಡದೇ ಮೋಸ ಮಾಡಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.

ಹಿರ್ಗಾನ ಗ್ರಾಮದ ಸಯ್ಯದ್ ಯುನೀಸ್ (57) ಹಾಗೂ ಸಯ್ಯದ್ ಸುಹೇಲ್ (25) ಇವರು ಕಾರ್ಕಳ ಕಸಬಾ ಗ್ರಾಮದ ರುಭೀನಾ ಭಾನು (44)ರವರಿಂದ 2020ರಲ್ಲಿ 17,86,200 ರೂ.ಮೌಲ್ಯದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ.

ಚಿನ್ನಾಭರಣವನ್ನು ಕಾರ್ಕಳದ ಸ್ಥಳೀಯ ಸಹಕಾರಿ ಸಂಘದ ಶಾಖೆಯಲ್ಲಿ ಅಡವು ಇರಿಸಿ ಆಭರಣಗಳನ್ನು ಬಿಡಿಸಿಕೊಡುವುದಾಗಿ ಹೇಳಿ, ವಾಪಾಸು ಬಿಡಿಸಿಕೊಡದೇ ಮೋಸ ಮಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *