Breaking
23 Mar 2026, Mon

ಬಿ.ಸಿ ರೋಡ್ ನಲ್ಲಿ ಬಂಟ್ವಾಳ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಪದ ಗ್ರಹಣ ಮತ್ತು ನಿರಂತರ ಕಲಿಕಾ ಕಾರ್ಯಕ್ರಮ

ಬಂಟ್ವಾಳ: ತಾಲೂಕು ಔಷಧ ವ್ಯಾಪಾರಸ್ಥರ ಸಂಘ ದ ಪದ ಗ್ರಹಣ ಮತ್ತು ನಿರಂತರ ಕಲಿಕಾ ಕಾರ್ಯಕ್ರಮ ಬಿಸಿ ರೋಡ್ ನ ರಿಕ್ಷಾ ಭವನ ದಲ್ಲಿ ಅ. 26ರಂದು ನಡೆಯಿತು.

ರಾಮ್ ದಾಸ್ ಶೆಣೈ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ನೂತನ ಅಧ್ಯಕ್ಷ ರಾಗಿ ಬಂಟ್ವಾಳ್ ರೋಶನಿ ಮೆಡಿಕಲ್ ರಿಚರ್ಡ್ ಡಿಸೋಜಾ, ಕಾರ್ಯದರ್ಶಿಗಳಾಗಿ ಶ್ರೀ ಗಣೇಶ್ ಮೆಡಿಕಲ್ ಕಲ್ಲಡ್ಕ ಇದರ ಚಂದ್ರಶೇಖರ್ ರೈ , ಕೋಶಾಧಿಕಾರಿಯಾಗಿ ಶ್ರೀದೇವಿ ಮೆಡಿಕಲ್ ಬಿಸಿ ರೋಡ್ ನ ಜಯಕೀರ್ತಿ, ಉಪಾಧ್ಯಕ್ಷ ರಾಗಿ ಸಿಟಿ ಮೆಡಿಕಲ್ ಫರಂಗಿಪೇಟೆ ಇದರ ಸುಕುಮಾರ ಅವರು ಅಧಿಕಾರ ಸ್ವೀಕರಿಸಿದರು.

ಮಾಜಿ ಅಧ್ಯಕ್ಷ ರಾಮ್ ದಾಸ್ ಶೆಣೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಶ್ರೀ ದುರ್ಗಾ ಮೆಡಿಕಲ್ ಪಾಣೆಮಂಗಳೂರು ಪ್ರಭಾಕರ್ ಭಟ್ ಅವರು ಪ್ರತಿಜ್ಞಾ ವಿಧಿಯನ್ನು ನೆರವೇರಿಸಿದರು.

ಕಾರ್ಯಕ್ರಮಕ್ಕೆ ಅಥಿತಿ ಗಳಾಗಿ ಆಗಮಿಸಿದ ಉಪ ನಿಯಂತ್ರಣ ಅಧಿಕಾರಿ ಟಿ .ಪಿ ಸುಜಿತ್ ದ.ಕ. ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಮಾತನಾಡಿ ಔಷಧ ಮತ್ತು ಇನ್ನಿತರ ನಿಬಂಧನೆಗಳ ಬಗ್ಗೆ ಸಲಹೆ ,ಸೂಚನೆ ನೀಡಿದರು.

S.K.D.C&D.A. ಯ ಅಧ್ಯಕ್ಷರಾದ ಅರುಣ್ ಶೆಟ್ಟಿ, ಕಾರ್ಯದರ್ಶಿ ಡಾ. A.K.ಜಮಾಲ್ ಹಾಗೂ ಇನ್ನಿತರ ಪದಾಧಿಕಾರಿ ಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಚಂದ್ರಶೇಖರ್ ರೈ ಪ್ರಾರ್ಥನೆ ಹಾಡಿದರು. ಪದ್ಮವಿಕಾಸ್ ಮೆಡಿಕಲ್ ಮೇಲ್ಕಾರ್ ರಾಜೇಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು.

ಗಣೇಶ್ ಮೆಡಿಕಲ್ ಬಿಸಿ ರೋಡ್ ಇದರ ವಿನಯ ರೈ ಸಲಹೆ ಸೂಚನೆ ನೀಡಿದರು,ಚಂದ್ರಶೇಖರ್ ರೈ ಅವರ ಧನ್ಯವಾದ ಸಲ್ಲಿಸಿದರು. ತಾಲೂಕಿನ ಎಲ್ಲಾ ಕೆಮಿಸ್ಟ್ ಭಾಂದವರು ಕಾರ್ಯಕ್ರದ ಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *