Breaking
11 Aug 2026, Tue

ಕಾರ್ಕಳ ತಾಲೂಕಿನ ಜಾರ್ಕಳದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಪೊಲೀಸರ ದಾಳಿ

ಕಾರ್ಕಳ : ಸರಕಾರಿ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯ ಕೋರೆಯ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ ಕಾರ್ಕಳ ತಾಲೂಕಿನ ಜಾರ್ಕಳದಲ್ಲಿ ಅ.22 ರಂದು ನಡೆದಿದೆ.

ಕಾರ್ಕಳ ಪೊಲೀಸ್ ಉಪನಿರೀಕ್ಷಕರಾದ ಮುರಳೀಧರ ನಾಯ್ಕ್ ರವರಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಎರ್ಲಪಾಡಿ ಗ್ರಾಮದ ಜಾರ್ಕಳದ ಗಣಿಗಾರಿಕಾ ಸ್ಥಳಕ್ಕೆ ಈ ದಾಳಿಯನ್ನು ನಡೆಸಲಾಗಿದೆ.

ದಾಳಿಯ ವೇಳೆ ರಾಜೇಶ್ ಶೆಟ್ಟಿ ಎಂಬಾತ ಯಾವುದೇ ಪರವಾನಿಗೆ ಹೊಂದದೇ, ಕಪ್ಪು ಕಲ್ಲುಗಳನ್ನು ಮಾರಾಟಕ್ಕಾಗಿ ಸಂಗ್ರಹ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಯು ಸ್ವಂತ ಲಾಭಕ್ಕಾಗಿ ಗಣಿಗಾರಿಕೆ ನಡೆಸಿ ಕಳವು ಮಾಡಿದ್ದಾಗಿ ತಿಳಿದುಬಂದಿದೆ.

ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *