Breaking
11 Aug 2026, Tue

ಕೊಡಿಪಾಡಿಯಲ್ಲಿ ಸಿಡಿಲು ಬಡಿದು ಮೂವರು ಗಾಯ

ಮಂಗಳೂರು: ಸುರತ್ಕಲ್‌ನ ಕೊಡಿಪಾಡಿ ಮಾಧವ ನಗರದಲ್ಲಿ ಚಂದ್ರಹಾಸ್ ಎಂಬವರ ಮನೆಗೆ ಅ.18 ರಂದು ಸಿಡಿಲು ಬಡಿದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.

ಅ.18 ರಂದು ಸಿಡಿಲು ಗುಡುಗಿನ ಜೊತೆಗೆ ಮಳೆಯ ಅಬ್ಬರ ಜೋರಾಗಿದ್ದು ಮನೆಯ ವಿದ್ಯುತ್ ಲೈನ್‌ಗಳು ಸುಟ್ಟು ಹೋಗಿದ್ದು, ಗೋಡೆ ಬಿರುಕು ಬಿಟ್ಟಿದೆ. ಮನೆಯೊಳಗಿನ ಕೋಣೆಯೊಂದರಲ್ಲಿ ಓದುತ್ತಿದ್ದ ಲಾವಣ್ಯ ಹಾಗೂ ಸೌಜನ್ಯ ಅವರಿಗೆ ತಲೆಯ ಭಾಗಕ್ಕೆ ಸಿಡಿಲೇಟು ಬಿದ್ದಿದ್ದು , ಅಜ್ಜಿ ಬೇಬಿ ಅವರಿಗೆ ಕೈ ಭಾಗಕ್ಕೆ ಸಣ್ಣ ಗಾಯವಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಸ್ಥಳೀಯ ಮಹಾನಗರ ಪಾಲಿಕೆಯ ನಿಕಟ ಪೂರ್ವ ಸದಸ್ಯೆ ಶ್ವೇತಾ ಪೂಜಾರಿ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *