Breaking
22 Mar 2026, Sun

ಬಳ್ಳಾರಿಯ ಆಸ್ಪತ್ರೆಯೊಂದರಲ್ಲಿ ಮಲಗಿದ ಹಾಗೇ ನಟನೆ ಮಾಡಿ ಮೊಬೈಲ್ ಎಗರಿಸಿದ ಕಳ್ಳ

ಬಳ್ಳಾರಿ: ಮಲಗಿದ ಹಾಗೇ ನಟನೆ ಮಾಡಿ ಕಳ್ಳನೊಬ್ಬ ಮೊಬೈಲ್ ಕದ್ದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿರುವ ಸಂಡೂರು ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ಆಸ್ಪತ್ರೆ ಓಪಿಡಿ ಬಳಿ ರೋಗಿಯ ಸಂಬಂಧಿಯೊಬ್ಬರು ಮಲಗಿದ್ದರು. ಈ ವೇಳೆ ಖದೀಮನೊಬ್ಬ ಅವರ ಪಕ್ಕದಲ್ಲಿ ಮಲಗಿದ ಹಾಗೇ ನಟನೆ ಮಾಡಿ ಜೇಬಿನಲ್ಲಿದ್ದ ಮೊಬೈಲ್ ಎಗರಿಸಿ ಪರಾರಿಯಾಗಿದ್ದಾನೆ.

ಸದ್ಯ ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *