Breaking
22 Mar 2026, Sun

ಊಟ ಮಾಡಿ ಮಲಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ

ಕಾಸರಗೋಡು: ರಾತ್ರಿ ಊಟ ಮಾಡಿ ಮಲಗಿದ್ದ ಮದ್ಯ ವಯಸ್ಕ ವ್ಯಕ್ತಿ ಮನೆಯ ಬಳಿಯ ಬಾವಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕಾಸರಗೋಡುವಿನ ಬೋವಿಕ್ಕಾನದಲ್ಲಿ ನಡೆದಿದೆ.

ಬೋವಿಕ್ಕಾನ 36 ನೇ ನಿವಾಸಿ ಎಂ.ಚೋಯಿ (73) ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯಾಗಿದ್ದಾರೆ.

ಗುರುವಾರ ರಾತ್ರಿ ಚೋಯಿ ಊಟ ಮಾಡಿ ಮಲಗಿದ್ದು ಇಂದು ಬೆಳಗ್ಗೆ ನಾಪತ್ತೆಯಾಗಿದ್ದರು. ಮನೆಯವರು ಹುಡುಕಾಡುವ ಮಧೈ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ.

ಕಾಸರಗೋಡು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿ ವಿ.ಎಂ.ಸತೀಶರ ನೇತೃತ್ವದ ತಂಡ ಮೃತದೇಹವನ್ನು ಮೇಲಕೆತ್ತಿ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಿದೆ. ಇವರು ಸೋಡಿಯಂ ಕುಸಿತ ಸಂಬಂಧ ರೋಗದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಮೃತರು ಪತ್ನಿ ಪುಷ್ಪವಲ್ಲಿ, ಮಕ್ಕಳಾದ ಬಿಂದು, ವೀಣ ಅಳಿಯಂದಿರಾದ ಜಯನ್,ಗಂಗಾಧರನ್, ಸಹೋದರರಾದ ಅಪ್ಪು ಚಿರುದ ಕುಞ ಎಂಬಿವರನ್ನು ಅಗಲಿದ್ದಾರೆ.

ಆದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *