Breaking
12 Aug 2026, Wed

ಮಧ್ಯಪ್ರದೇಶದಲ್ಲಿ ಫಿನಾಯಿಲ್ ಕುಡಿದು 25 ಮಂಗಳಮುಖಿಯರು ಆತ್ಮಹತ್ಯೆಗೆ ಯತ್ನ

ಮಧ್ಯಪ್ರದೇಶ: ಫಿನಾಯಿಲ್ ಸೇವಿಸಿ 25 ಮಂಗಳಮುಖಿಯರು ಆಸ್ಪತ್ರೆ ದಾಖಲಾಗಿರುವ ಘಟನೆ ಮಧ್ಯಪ್ರದೇಶ ಇಂದೋರ್‌ನಲ್ಲಿ ಅ.15 ರಂದು ರಾತ್ರಿ ನಡೆದಿದೆ.

ಘಟನೆ ಕುರಿತು ಸರಕಾರಿ ಆಸ್ಪತ್ರೆಯ ಅಧಿಕಾರಿ ಬಸಂತ್ ಕುಮಾರ್ ನಿಂಗ್ವಾಲ್ ಹೇಳಿಕೆ ನೀಡಿದ್ದು ಟ್ರಾನ್ಸ್ಜೆಂಡರ್ ಸಮುದಾಯದ ಸುಮಾರು 25 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಫಿನಾಯಿಲ್ ಸೇವಿಸಿದ್ದಾರೆಂದು ಹೇಳಿಕೊಂಡಿದ್ದಾರೆ, ರೋಗಿಗಳ ಸ್ಥಿತಿ ಸ್ಥಿರವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಆದರೆ ಯಾವ ಕಾರಣಕ್ಕೆ ಫಿನಾಯಿಲ್ ಕುಡಿದಿದ್ದಾರೆ ಎಂಬುದು ಮಾತ್ರ ತಿಳಿದಿಲ್ಲ ಎಂದಿದ್ದಾರೆ.

ಇನ್ನು ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಧಿಕಾರಿಗಳು ಮಾಹಿತಿಯನ್ನು ಕಲೆಹಾಕುತಿದ್ದಾರೆ. ಜೊತೆಗೆ ತನಿಖೆಯ ಬಳಿಕವಷ್ಟೇ ಹೆಚ್ಚಿನಮಾಹಿತಿ ಸಿಗಲಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *