ಬಂಟ್ವಾಳ: ಸಜೀಪ ಮೂಡದ ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳದಲ್ಲಿ ಸಾಮೂಹಿಕ ಶ್ರೀ ಮಂತ್ರ ಪಠಣ ಅಂಗವಾಗಿ ದುರ್ಗಾ ಸೂಕ್ತ , ಪುರುಷ ಸೂಕ್ತ , ಭಾಗ್ಯ ಸೂಕ್ತ, ರುದ್ರ ಸೂಕ್ತ, ಗಣಪತಿ ಸೂಕ್ತ , ಸೌರ ಸೂಕ್ತ, ದೇವಿ ಸೂಕ್ತ, ಗಣಪತಿ ಅಥರ್ವ ಶೀರ್ಷ, ಶ್ರೀ ರುದ್ರ ನಮಕ ಚಮಕ, ಮಂತ್ರ ಪುಷ್ಪ, ಪಠಣವು ನಡೆಯಿತು.

ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ , ಎ.ರವಿ ಶಂಕರ ಮೈಯ್ಯ, ಶಾಂತಾ ರಾಮ ರಾವ್, ರಾಮಚಂದ್ರ ಮೈಯ್ಯ, ಧನೇಶ್ವರ ರಾವ್, ಮಿಥುನ ರಾವ್, ನಾಗರಾಜ ಭಟ್, ಚಂದ್ರಮೋಹನರಾವ್, ಶ್ರೀನಿವಾಸ ಶಿವಥಾಯ, ಎಂ ಜಯರಾಮ ಮಯ್ಯ, ಸ ಜೀಪ ನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಶ್ರೀದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್, ರಮೇಶ ಅನ್ನ ಪಾಡಿ, ಸುಧಾಕರ, ಖುಶೇಷ, ಹರೀಶ್ ಬಂಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




