ಉಡುಪಿ: ನಿಯಂತ್ರಣ ತಪ್ಪಿ ಆಟೋರಿಕ್ಷಾ ಚರಂಡಿಗೆ ಉರುಳಿ ಬಿದ್ದ ಘಟನೆ ಮಣಿಪಾಲ ಈಶ್ವರ ನಗರದಲ್ಲಿ ನಡೆದಿದೆ.

ಮೂರ್ಛೆ ರೋಗದಿಂದ ಬಳಲುತ್ತಿರುವ ಆಟೋ ಚಾಲಕ ಪ್ರಜ್ಞೆ ತಪ್ಪಿ ಪುರಸಭೆಗೆ ಸೇರಿರುವ ಕುಡಿಯುವ ನೀರಿನ ಪಂಪಿಂಗ್ ಸ್ಟೇಷನ್ ಬಳಿ ಬಿದ್ದಿದ್ದಾನೆ. ಈ ವೇಳೆ ಆಟೋ ವಿರುದ್ಧ ದಿಕ್ಕಿನಲ್ಲಿ ಪಲ್ಟಿಯಾಗಿ ಸಂಪೂರ್ಣವಾಗಿ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ವಾಹನದಲ್ಲಿ ಪ್ರಯಾಣಿಕರಿರದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.


ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.




