ಬಂಟ್ವಾಳ: ಕೇಂದ್ರ ಮೀಸಲು ಪೊಲೀಸ್ ಇಲಾಖೆಯಲ್ಲಿ ಅಸಿಸ್ಟೆಂಟ್ ಪೊಲೀಸ್ ನಿರೀಕ್ಷರಾಗಿ ಸೇವೆ ಸಲ್ಲಿಸಿ ನಿವೃತ್ತಿ ಗೊಂಡು ಕೃಷಿಯಲ್ಲಿ ತೊಡಗಿಸಿಕೊಂಡ ಸಂಘದ ಸದಸ್ಯ ರಾಜು ಪೂಜಾರಿ ಹಲಾಯಿ ಕುಕ್ಕಿಪಾಡಿ ಇವರನ್ನು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಗೌರವವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರ ಪ್ರಭಾಕರ ಪ್ರಭು, ಉಪಾಧ್ಯಕ್ಷ ಸತೀಶ್ ಪೂಜಾರಿ, ಸಂಘದ ಮಾಜಿ ಅಧ್ಯಕ್ಷ ಎ ಗೋಪಿನಾಥ್ ರೈ, ಸಿದ್ದಕಟ್ಟೆ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ,ಸಂಘದ ನಿರ್ದೇಶಕರಾದ ಸಂದೇಶ ಶೆಟ್ಟಿ ಪೂಡುಂಬ, ರಾಜೇಶ್ ಶೆಟ್ಟಿ ಕೊನೆರಬೆಟ್ಟು,ಹರೀಶ್ ಆಚಾರ್ಯ, ದಿನೇಶ್ ಪೂಜಾರಿ ಹುಲಿಮೇರು, ಉಮೇಶ್ ಗೌಡ, ದೇವರಾಜ್ ಸಾಲಿಯಾನ್, ವೀರಪ್ಪ ಪರವ, ಜಾರಪ್ಪ ನಾಯ್ಕ, ಮಾಧವ ಶೆಟ್ಟಿಗಾರ್, ಮಂದಾರತಿ.ಎಸ್.ಶೆಟ್ಟಿ, ಅರುಣಾ. ಎಸ್. ಶೆಟ್ಟಿ, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.