Breaking
22 Mar 2026, Sun

ಕಜೆಕಾರು ಪ್ರಾ. ಕೃ. ಪ. ಸ. ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ

ಬೆಳ್ತಂಗಡಿ: ಕಜೆಕಾರು ಪ್ರಾ. ಕೃ. ಪ. ಸ. ಸಂಘ (ನಿ) ಪಾಂಡವರಕಲ್ಲು ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಬೆಯು ಸೆ.22 ರಂದು ಸಂಘದ ವಠಾರದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಸತೀಶ್ ಬಂಗೇರ ಕಜೆಕಾರು ಅವರು ಆರ್ಥಿಕ ವರ್ಷದಲ್ಲಿ ಸಂಘವು 175.62 ಕೋಟಿ ರೂಪಾಯಿ ವ್ಯವಹಾರ ನಡೆಸಿ 76.76 ಲಕ್ಷ ರೂಪಾಯಿ ಲಾಭ ಗಳಿಸಿದೆ. ವರ್ಷಾಂತ್ಯಕ್ಕೆ 20.00 ಕೋಟಿ ರೂಪಾಯಿ ಠೇವಣಾತಿ 26.56 ಕೋಟಿ ರೂಪಾಯಿ ಹೊರಬಾಕಿ ಸಾಲ ಇರುತ್ತದೆ. 2860 ಸದಸ್ಯರಿದ್ದು 1.84 ಕೋಟಿ ರೂಪಾಯಿ ಪಾಲು ಬಂಡವಾಳ ಇರುತ್ತದೆ ಸಂಘದ ಸದಸ್ಯರಿಗೆ ಶೇಕಡ 16 ಡಿವಿಡೆಂಟ್ ಘೋಷಿಸಲಾಗಿದೆ ಎಂದರು.

11 ಮಂದಿಗೆ ಮರಣ ನಿಧಿಯಿಂದ ರೂಪಾಯಿ 1,03,913.00 ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಔಷಧ ಉಪಚಾರಕ್ಕಾಗಿ 22 ಮಂದಿಗೆ 1,20,000.00, ಆರ್ಥಿಕವಾಗಿ ಹಿಂದುಳಿದ 20 ಮಂದಿಯ ಅಂತ್ಯ ಸಂಸ್ಕಾರಕ್ಕಾಗಿ ರೂಪಾಯಿ 60,000.00 ಹಾಗೂ ಸಂಘದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕ್ರೀಡೆಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಇನ್ನಿತರ ಸಾಮಾಜಿಕ ಚಟುವಟಿಕೆಗಳಿಗೆ ಒಂದು ಲಕ್ಷ ನೀಡಲಾಗಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ 561 ಬೆಳೆ ಸಾಲಗಾರರನ್ನು ಬೆಳೆ ವಿಮೆಗೆ ಒಳಪಡಿಸಲಾಗಿದೆ ರೂ. 18,76,13.70 ಬೆಳೆ ವಿಮೆ ಪಾವತಿಸಲಾಗಿದೆ. ಸಂಘದ ಆವರಣದಲ್ಲಿ ರೈತರಿಗೆ ಅನುಕೂಲವಾಗುವಂತಹ ತರಕಾರಿ ಬೀಜ ಹಾಗು ಕೃಷಿ ಸಲಕರಣೆಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು ಎಂದರು.

ಸಭೆಯಲ್ಲಿ ಸಂಘದ ನಿವೃತಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸರಸ್ವತಿ ಕೆ ಮತ್ತು ಅಧ್ಯಾಪಕರಾದ ಹಮೀದ್ ಪಿ ಅವರನ್ನು, 6 ಜನ ಕೃಷಿಕರನ್ನು 3 ಜನ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಬಡೆಗಕಜೆಕಾರು ತೆಂಕಕಜೆಕಾರು, ಪಾಂಡವರ ಕಲ್ಲು ಸೇರಿ 3 ಶಾಲೆಯ 19 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಮೋಹನಂದ ಪಿ, ನಿರ್ದೇಶಕರಾದ ಯಶವಂತ ಕುಮಾರ್, ದಿವಾಕರ ಬಿ, ವಿಶ್ವನಾಥ ನಾಯ್ಕ, ವಿನುತ್, ವಿಶ್ವನಾಥ ನಾಯ್ಕ, ವಸಂತ ಎಂ, ಅಣ್ಣಿಕುರುವರಗೋಳಿ, ಮಾಲತಿ ಶೋಭಾ, ಸವಿತಾ ಯೋಗಿನಿ ಹಾಗೂ ವೃತ್ತಿಪರ ನಿರ್ದೇಶಕರಾದ ದಿನೇಶ್ ಜೆಂಕ್ಯಾರು ಉಪಸ್ಥಿತರಿದ್ದರು.

ಕೃಷಿಕರ ಬಗ್ಗೆ ದೇವದಾಸ ಇವರು ವಿವರಣೆಯನ್ನು ನೀಡಿದರು.

ನಿರ್ದೇಶಕರಾದ ಯಶವಂತ ಕುಮಾರ ಅವರು ಸ್ವಾಗತಿಸಿ, ಉಪಾಧ್ಯಕ್ಷರಾದ ಮೋಹನಂದ ಪಿ. ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರವರು ಕಾರ್ಯಕ್ರಮ ನಿರೂಪಣೆಯೊಂದಿಗೆ ವಾರ್ಷಿಕ ವರದಿ ಹಾಗೂ ಆಯವ್ಯಯ ಮಂಡಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತವಾಯಿತು.

Leave a Reply

Your email address will not be published. Required fields are marked *