ಸಜೀಪ : ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿ ಸಜೀಪ ಮುನ್ನೂರು ಇಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಷಷ್ಠಿ ಪೂಜಾ ಮಹೋತ್ಸವವು ಡಿ. 25 ಮತ್ತು 26 ರಂದು ಬ್ರಹ್ಮಶ್ರೀ ನಿದೇಶ್ವರ ಕೆ.ಯು ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆಯಾಗಿದೆ.

ಶ್ರೀ ದೇವಳದಲ್ಲಿ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅವರು ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿ, ವಿವಿಧ ತಾಂತ್ರಿಕ ವೈದಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವ ಈ ಮಹೋತ್ಸವದಲ್ಲಿ ಊರ ಪರ ಊರ ಎಲ್ಲಾ ಭಕ್ತಾಭಿಮಾನಿಗಳು ಸಹಕಾರ ನೀಡುವಂತೆ ವಿನಂತಿಸಿದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯ ಶಂಕರ ಭಾಶ್ರೀತಾಯ ಎಲ್ಲಾ ಭಗವದ್ಭಕ್ತರು ವರ್ಷಾವಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ವಿನಂತಿಸಿದರು.

ಈ ಸಂದರ್ಭ ಪ್ರಮುಖರಾದ ಅರ್ಚಕ ಕೃಷ್ಣ ಭಟ್, ಹರಿಪ್ರಸಾದ್ ಭಂಡಾರಿ,ಧನಂಜಯ ಶೆಟ್ಟಿ, ರಾಜೇಶ್ ಪೂಜಾರಿ,ಕವಿತಾ,ಕಾವ್ಯಶ್ರೀ.ಎನ್ಕೆ ಶಿವ,ಶ್ರೀನಿವಾಸ್ ನಾಯಕ್ , ದೀಕ್ಷಿತ್ ಶೆಟ್ಟಿ, ಪ್ರಸಾದ್ ಮುಗುಳಿಯ, ಧನೇಶ್ವರ ರಾವ್ ,ಸುಮಂತ್, ದಿವಾಕರ ಶೆಟ್ಟಿ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.



