ಬಂಟ್ವಾಳ: ನವರಾತ್ರಿಯ ಪವಿತ್ರ ಉತ್ಸವದ ಪ್ರಾರಂಭದ ಅಂಗವಾಗಿ ಶ್ರೀ ಪೂರ್ಣನಾನಂದ ಸೇವಾ ಪ್ರತಿಷ್ಠಾನ (ರಿ.) ಹಾಗೂ ದ.ಕ. ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ (ರಿ) ಇವರ ಆಶ್ರಯದಲ್ಲಿ, ವಗ್ಗ ವಲಯದ ಆತಿಥ್ಯದಲ್ಲಿ, ಸೆ. 22 ರಂದು ಶ್ರೀ ಮಹೋತಭಾರ ಶ್ರೀಕಾರಿಂಜೇಶ್ವರ ದೇವಸ್ಥಾನದ ಪಾರ್ವತಿ ದೇವಿಯ ಸನ್ನಿಧಿಯಲ್ಲಿ ಭಕ್ತಿಭಾವಪೂರ್ಣವಾಗಿ ಚಂಡಿಕಾ ಹೋಮ ಅದ್ದೂರಿಯಾಗಿ ನಡೆಯಿತು.


ಈ ಪವಿತ್ರ ಚಂಡಿಕಾಯಾಗವನ್ನು ವಿದ್ವಾಂಸ ಪುರೋಹಿತರಾದ ಶ್ರೀಯುತ ಮಿಥುನ್ ನಾವುಡ ಅವರ ನೇತೃತ್ವದಲ್ಲಿ ಶಾಸ್ತ್ರೀಯ ವಿಧಿ ವಿಧಾನಗಳೊಂದಿಗೆ ನಡೆಸಲಾಯಿತು. ಶಕ್ತಿಯ ಆರಾಧನೆ ಶುದ್ಧ, ಸಂಸ್ಕೃತಿ ಹಾಗೂ ಭಕ್ತಿ ಭಾವದೊಂದಿಗೆ ಜರುಗಿದ್ದು, ವಿಶೇಷವಾಗಿ ಹೋಮದ ಪೂರ್ಣಾಹುತಿ ಸಂದರ್ಭದಲ್ಲಿ ಭಕ್ತರ ಭಕ್ತಿ ದರ್ಶನೀಯವಾಗಿತ್ತು. ಬಳಿಕ ದೇವಿಯ ಆಶೀರ್ವಚನ ಹಾಗೂ ಪ್ರಸಾದ ವಿತರಣೆ ನೆರವೇರಿತು.

ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡರಾದ ಜಿನರಾಜ ಆರಿಗ, ಉದ್ಯಮಿ ಡಿ. ರಮೇಶ ನಾಯಕ್ ಮೈರಾ, ಶ್ರೀ ಕ್ಷೇತ್ರ ಕಾರಿಂಜ ಇದರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ವೀರೇಂದ್ರ ಬಿ. ಅಮೀನ್, ಸದಸ್ಯರಾದ ಉದಯ ನಾಯಕ್ ಮಾಂಗಜೆ, ಜನಾರ್ಧನ ಆಚಾರ್ಯ, ದ.ಕ. ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ದಯಾನಂದ ನಾಯಕ್, ಕಾರ್ಯದರ್ಶಿ ಸುಧಾಕರ ಪ್ರಭು ಪೆರ್ಮರೋಡಿ, ಕಾವಳಪಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಶರ್ಮ, ದೇವಸ್ಥಾನದ ಕಾರ್ಯನಿರ್ವಾಹಕರಾದ ವಿನಯ ಕುಮಾರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ನವರಾತ್ರಿಯ ಶಕ್ತಿಯ ಆರಾಧನೆಯ ಈ ಪವಿತ್ರ ಪರಂಪರೆಯಲ್ಲಿ ಪುಣ್ಯಕ್ಷೇತ್ರದ ಪವಿತ್ರತೆಯನ್ನು ಮತ್ತಷ್ಟು ಉಜ್ವಲಗೊಳಿಸುವ ಕಾರ್ಯದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಮುರಳಿದರ ಪ್ರಭು ವಗ್ಗ, ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನ ಸಮಿತಿಯ ನಿಕಟಪೂರ್ವ ಸದಸ್ಯರಾದ ದಿನೇಶ ನಾಯಕ್ ಕಾವಲಕಟ್ಟೆ ಅವರ ಮುಂದಾಳತ್ವದಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸರ್ವ ಶ್ರೀಗಳಾದ ಜಯರಾಮ ಭಟ್ ಮುಲ್ಕಾಜೆಮಾಡ, ರಾಮಕೃಷ್ಣ ಪ್ರಭು ಮಾರಿಬೆಟ್ಟು, ಹರಿಶ್ಚಂದ್ರ ಪ್ರಭು ಮಾರಿಬೆಟ್ಟು, ಗಂಗಾಧರ ಪ್ರಭು ಮುಚ್ಚುಳ್ಕೊಡಿ ನೆಲ್ಲಿಗುಡ್ಡೆ, ಸೀತಾರಾಮ್ ಪ್ರಭು ಕಲಾಯಿ, ಶಶಿಕಲಾ ಸುಧಾಕರ ಶೆಣೈ ಡೆಚ್ಚಾರು, ಶಿವರಾಮ ಪ್ರಭು ಮಾರಿಬೆಟ್ಟು, ಸಂದೀಪ್ ನಾಯಕ್ ವಗ್ಗ ಮತ್ತು ಅನೇಕ ಭಕ್ತರು ಸಕ್ರಿಯವಾಗಿ ಪಾಲ್ಗೊಂಡರು.

ಭಕ್ತಿ, ಶುದ್ಧತೆ ಮತ್ತು ಸಂಸ್ಕೃತಿ ತುಂಬಿದ ಈ ಹೋಮದಲ್ಲಿ ಪಾಲ್ಗೊಂಡ ಭಕ್ತರೆಲ್ಲರೂ ಮಹಾಮಾತೆಯ ಕೃಪೆಗೆ ಪಾತ್ರರಾದರು.


