Breaking
19 Sep 2026, Sat

ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ: ಆರೋಪಿಯ ಬಂಧನ

ಮಂಗಳೂರು: ಕಾರ್ನಾಡ್ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸುರತ್ಕಲ್‌ನ ಕಾಟಿಪಳ್ಳ ಕೃಷ್ಣಾಪುರದ ನಿವಾಸಿ ಯತಿರಾಜ್(27) ಎಂದು ಗುರುತಿಸಲಾಗಿದೆ.

ಸೆ.14ರಂದು ಗಾಂಜಾ ಸೇವನೆ ಮಾಡಿದ ಆರೋಪದ ಮೇರೆಗೆ ಮೂವರು ವ್ಯಕ್ತಿಗಳಾದ ಮುಲ್ಕಿ ಕಾಪಿಕಾಡ್‌ನ ಪ್ರಜ್ವಲ್ (25), ಬೈಕಂಪಾಡಿಯ ಕುರಿಕಟ್ಟೆ ನಿವಾಸಿ ಪ್ರಮೋದ್ (22) ಮತ್ತು ಸ್ಟೀವನ್ (29) ಅವರನ್ನು ಬಂಧಿಸಲಾಗಿತ್ತು. ಬಂಧಿತರು ವಿಚಾರಣೆ ವೇಳೆ ಯತಿರಾಜ್‌ನ ಕುರಿತು ನಿರ್ಣಾಯಕ ಮಾಹಿತಿಯನ್ನು ಒದಗಿಸಿದ್ದರು .

ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಯತಿರಾಜ್ ನನ್ನು ಸೆರೆಹಿಡಿದು ಆತನಿಂದ 1.2 ಕಿಲೋಗ್ರಾಂ ಗಾಂಜಾ, ಸಾಗಣೆಗೆ ಬಳಸಿದ ಆಟೋ ಮತ್ತು ನಗದನ್ನು ವಶಪಡಿಸಿಕೊಂಡಿದ್ದು, ನಂತರ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *